ಈಜಿಪ್ಟ್‌ನಲ್ಲಿನ ಅಪರಾಧ ಮತ್ತು ಭ್ರಷ್ಟಾಚಾರದಿಂದಾಗಿ ಪ್ರತಿವರ್ಷ ಸುಮಾರು 6 ಬಿಲಿಯನ್ (1 billion - 100 ಕೋಟಿ) ಅಮೆರಿಕನ್ ಡಾಲರ್‌ನಷ್ಟು ನಷ್ಟ ಉಂಟಾಗುತ್ತಿದ್ದು, 2000ರಿಂದ 2008ರ ಅವಧಿಯವರೆಗೆ 57.2 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಗ್ಲೋಬಲ್ ಫೈನಾಶಿಯಲ್ ಇಂಟೆಗ್ರಿಟಿ (ಜಿಎಫ್ಐ) ವರದಿ ತಿಳಿಸಿದೆ.
ವೈಯಕ್ತಿಕ ತೆರಿಗೆ ವಂಚನೆ, ಭ್ರಷ್ಟಾಚಾರ ಮತ್ತು ಅಪರಾಧಗಳಿಂದ ದೇಶಕ್ಕೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗುತ್ತಿದೆ ಎಂದು ವಾಷಿಂಗ್ಟನ್ ಮೂಲದ ವಾಚ್ ಡಾಗ್ ಟಿಪ್ಪಣಿಯ ಸಾರಾಂಶ ಕೂಡ ವಿವರಿಸಿದೆ.
ಈಜಿಪ್ಟ್ ಸೇರಿದಂತೆ ಮಧ್ಯ ಏಷ್ಯಾ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ಅಕ್ರಮವಾಗಿ ಸಂಪಾದಿಸಿದ ಹಣ ಹೊರಹರಿವು ಪ್ರಮಾಣ ಹೆಚ್ಚಳವಾಗುತ್ತಿರುವುದಾಗಿ ವರದಿ ತಿಳಿಸಿದೆ. ಈಜಿಪ್ಟ್‌ನಲ್ಲಿ ಭ್ರಷ್ಟಾಚಾರದಲ್ಲಿ ನಡೆಯುತ್ತಿರುವ ಹಗರಣಗಳಲ್ಲಿ ಮುಬಾರಕ್ ಅವರದ್ದು ಒಂದು ಭಾಗ ಮಾತ್ರ ಎಂದು ವರದಿಯ ಲೇಖಕ ಡೆವ್ ಕಾರ್ ಹೇಳಿದ್ದಾರೆ.
ದುರ್ಬಲ ಆಡಳಿತದಿಂದಾಗಿ ದೇಶದಲ್ಲಿ ಲಂಚ, ಕಳ್ಳತನ, ಅಪರಾಧ ಹಾಗೂ ತೆರಿಗೆ ವಂಚನೆ ಮೂಲಕ ಈಜಿಪ್ಟ್‌ನಿಂದ ಬಿಲಿಯನ್ ಗಟ್ಟಲೆ ಹಣವನ್ನು ಹೊರದೇಶದಲ್ಲಿ ಕೂಡಿಡುತ್ತಿದ್ದಾರೆ.