ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್: ಕ್ಯಾನ್ಸರ್‌, ಖಿನ್ನತೆಯಿಂದ ಹಾಸಿಗೆ ಹಿಡಿದ ಮುಬಾರಕ್? (Egypt | Hosni Mubarak | very sick | fainting | cancer | bedridden)
PTI
ಈಜಿಪ್ಟ್ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರು ತೀವ್ರ ಖಿನ್ನತೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಕಳೆದ ಶುಕ್ರವಾರ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡಿದ ನಂತರ ಹೊಸ್ನಿ ರೆಡ್ ಸೀ ರೆಸಾರ್ಟ್‌ನ ಶರ್ಮ್ ಎಲ್ ಶೇಕ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮುಬಾರಕ್ ಇದೀಗ ಹಾಸಿಗೆ ಹಿಡಿದಿದ್ದು, ನಡೆಯಲು ಅವರಿಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿದೆ ಎಂದು ರೆಸಾರ್ಟ್‌ನ ಸಿಬ್ಬಂದಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಮುಬಾರಕ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರು ತುಂಬಾ ನಿಶ್ಯಕ್ತರಾಗಿದ್ದಾರೆಂದು ಶಿಕ್ಷಕ ಅಹ್ಮದ್ ಅವರು ತಿಳಿಸಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವಿವರಿಸಿದೆ.

ಈಜಿಪ್ಟ್‌ನ ಪ್ರತಿಷ್ಠಿತ ಉದ್ಯಮಿ ಹುಸೈನ್ ಸಲೇಮ್ ಅವರ ಒಡೆತನದ ಮಾರ್ಟಿಮ್ ಜೋಲ್ಲೈ ವಿಲ್ಲೆ ಹೋಟೆಲ್‌ನಲ್ಲಿ ಮುಬಾರಕ್ ವಾಸ್ತವ್ಯ ಹೂಡಿದ್ದಾರೆ. ಸಲೇಮ್ ಹೊಸ್ನಿ ಅವರ ಅತ್ಯಂತ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಹೋಟೆಲ್‌ನ ಖಾಸಗಿ ದಾರಿಯಲ್ಲಿ ಅಂಬ್ಯುಲೆನ್ಸ್ ಮತ್ತು ವೈದ್ಯರನ್ನು ಕಂಡಿರುವುದಾಗಿ ಹೋಟೆಲ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ಮುಬಾರಕ್ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ವರದಿ ಹೇಳಿದೆ.
ಇವನ್ನೂ ಓದಿ