ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾವೋಗಳಿಗೆ ಗೃಹ, ರಕ್ಷಣಾ ಖಾತೆ ಕೊಡಬೇಡಿ:ಪಿಎಂಗೆ ಮನವಿ (Maoists | Jhala Nath Khanal | defence | home ministries | Nepal)
ಮಾಜಿ ಗೆರಿಲ್ಲಾ ಸದಸ್ಯರಾದ ಮಾವೋವಾದಿಗಳಿಗೆ ಗೃಹ ಹಾಗೂ ರಕ್ಷಣಾ ಖಾತೆ ಸೇರಿದಂತೆ ಹಲವು ಪ್ರಮುಖ ಸಚಿವ ಸ್ಥಾನವನ್ನು ನೀಡಬಾರದು, ಇದರಿಂದ ಅವರು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ ಎಂದು ನೇಪಾಳದ ಪ್ರಮುಖ ಮಾನವಹಕ್ಕು ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರು ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾರೆ.

ಮಾವೋವಾದಿಗಳಿಗೆ ಪ್ರಮುಖ ಖಾತೆಗಳನ್ನು ನೀಡಬಾರದು. ಅದೇ ರೀತಿ ಅವರು ವಶಪಡಿಸಿಕೊಂಡ ಆಸ್ತಿಗಳನ್ನು ಹಿಂತಿರುಗಿಸಿಲ್ಲ. ಅಲ್ಲದೇ ಮಾವೋ ಸಂಘಟನೆಗೆ ಜನರನ್ನು ಸೇರಿಸಿಕೊಳ್ಳುವುದನ್ನು ಮುಂದುವರಿಸಿರುವುದಾಗಿ ಪ್ರಧಾನಿ ಜಾಲಾಲ್ ನಾಥ್ ಖಾನಾಲ್ ಅವರಿಗೆ ಬರೆದಿರುವ ಜಂಟಿ ಪತ್ರದಲ್ಲಿ ತಿಳಿಸಿದ್ದಾರೆ.

ಶಾಂತಿ ಮಾತುಕತೆ ಪ್ರಕ್ರಿಯೆ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಸರಕಾರದಲ್ಲಿನ ಪ್ರಮುಖ ಖಾತೆಗಳನ್ನು ನೀಡಿದರೆ ಅವರು ಅದನ್ನು ದುರುಪಯೋಗಪಡಿಸಿಕೊಳ್ಳಲಿದ್ದಾರೆ ಎಂದು ಸಂಘಟನೆ ದೂರಿದೆ. ಮಾವೋವಾದಿ ಸಂಘಟನೆಯ ಸದಸ್ಯರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಅವರು ಯತ್ನಿಸುತ್ತಿದ್ದಾರೆ. ಹಾಗಾಗಿ ಪ್ರಧಾನಿ ಇದಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದೆ.

ಮಾವೋವಾದಿಗಳಿಗೆ ಗೃಹ ಮತ್ತು ರಕ್ಷಣಾ ಖಾತೆಯನ್ನು ನೀಡಬಾರದು ಎಂದು ಪ್ರಮುಖ ವಿರೋಧ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್ ಮತ್ತು ಇತರ ಡೆಮೋಕ್ರಟಿಕ್ ಪಕ್ಷಗಳು ಪ್ರಧಾನಿಯವರನ್ನು ಒತ್ತಾಯಿಸಿವೆ.
ಇವನ್ನೂ ಓದಿ