ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಇಟಲಿ ಪಿಎಂ (Silvio Berlusconi | prostitution trial | Rome | Italian | Medvedev,)
ವೇಶ್ಯಾವಾಟಿಕೆ ನಡೆಸಿರುವ ಆರೋಪಕ್ಕೆ ಸಿಲುಕಿರುವ ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರ ರಾಜಕೀಯ ಜೀವನ ಇಕ್ಕಟ್ಟಿನಲ್ಲಿ ಸಿಲುಕ್ಕಿದ್ದರೂ ಕೂಡ, ತಾನು ಸೆಕ್ಸ್ ಸ್ಕ್ಯಾಂಡಲ್ ಕುರಿತಂತೆ ಹೆಚ್ಚಿಗೆ ತಲೆಕೆಡಿಸಿಕೊಂಡಿಲ್ಲ ಎಂದು ರಷ್ಯಾ ಅಧ್ಯಕ್ಷರ ಜತೆ ಮಾತುಕತೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಿಲ್ವಿಯೋ ತಿಳಿಸಿದ್ದಾರೆ.

ಸೆಕ್ಸ್ ಸ್ಕ್ಯಾಂಡಲ್ ದೇಶದಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿದ್ದು, ಇದೀಗ 74ರ ಹರೆಯದ ಸಿಲ್ವಿಯೋ ಮೊದಲ ಬಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮೊರೋಕ್ಕೊದ 17ರ ಹರೆಯದ ಬಾಲಕಿ ಮೇಲೆ ಲೈಂಗಿಕ ಚಟುವಟಿಕೆ ನಡೆಸಿ, ನಂತರ ತಮ್ಮ ಅಧಿಕಾರದ ಪ್ರಭಾವ ಬಳಸಿ ವಿಷಯವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆಂಬ ಗಂಭೀರ ಆರೋಪವನ್ನು ಸಿಲ್ವಿಯೋ ಎದುರಿಸುತ್ತಿದ್ದಾರೆ.

ಆದರೆ ತನ್ನ ವಿರುದ್ಧದ ಸೆಕ್ಸ್ ಸ್ಕ್ಯಾಂಡಲ್ ಆರೋಪವನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿರುವ ಬೆರ್ಲುಸ್ಕೋನಿ, ಈ ಪ್ರಕರಣ ಒಂದು ದುರಂತ ಮತ್ತು ಶೇಮ್.ಅಷ್ಟೇ ಅಲ್ಲ ಪ್ರಾಸಿಕ್ಯೂಟರ್ ತನ್ನ ಸರಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿರುವುದಾಗಿಯೂ ಆರೋಪಿಸಿದ್ದಾರೆ.

ನಾನು ಈ ಬಗ್ಗೆ ಹೆಚ್ಚಿಗೆ ಏನೂ ಮಾತನಾಡಲಾರೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ ಅವರು,ತಾನು ಆರೋಪದ ಬಗ್ಗೆ ತಲೆಕೆಡಿಸಿಯೇ ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಷ್ಯಾ ಅಧ್ಯಕ್ಷ ಡೆಮಿಟ್ರಿ ಮೆಡ್ವೆಡೇವ್ ಅವರ ಜತೆ ಮಾತುಕತೆ ನಡೆಸಿದ ಅವರು ನಂತರ ಅವರು ಬುಧವಾರ ರಾತ್ರಿ ಅವರ ಜತೆ ಊಟೋಪಚಾರ ನಡೆಸಿ ಇಟಲಿಗೆ ಹಿಂದಿರುಗಿರುವುದಾಗಿ ವರದಿ ತಿಳಿಸಿದೆ.
ಇವನ್ನೂ ಓದಿ