ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ ನಂತ್ರ ಜರ್ದಾರಿ ಜತೆ ಕಾಫಿ ಕುಡಿದಿದ್ದೆ: ಮುಷರ್ರಫ್ (Benazir | Pakistan | Pervez Musharraf | assassination | Asif Ali Zardari)
PTI
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯಾದ ನಂತರವೂ ತಾನು ಅಸಿಫ್ ಅಲಿ ಜರ್ದಾರಿ ಜತೆ ಮಾತುಕತೆ ನಡೆಸಿರುವುದಾಗಿ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ತಿಳಿಸಿದ್ದಾರೆ.

ಸಾಮಾ (ಎಸ್ಎಎಂಎಎ) ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾನು ಜರ್ದಾರಿ ಜತೆ ಮಾತುಕತೆ ನಡೆಸಿದ್ದೇನೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಮಾತುಕತೆ ವೇಳೆಯಲ್ಲಿ ಸಿಗರೇಟ್ ಸೇದಿ ಕಾಫಿ ಕುಡಿದಿರುವುದಾಗಿ ವಿವರಿಸಿದ್ದಾರೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ವರಿಷ್ಠೆ ಬೆನಜೀರ್ ಭುಟ್ಟೋ ಮತ್ತು ಪಾಕಿಸ್ತಾನ ಮುಸ್ಲಿಮ್ ಲೀಗ್-ಎನ್ ವರಿಷ್ಠ ನವಾಜ್ ಶರೀಫ್ ಪಾಕಿಸ್ತಾನಕ್ಕೆ ವಾಪಸ್ ಆಗದಿದ್ದರೆ ನಿಜಕ್ಕೂ ಪಾಕಿಸ್ತಾನ ಮುಸ್ಲಿಮ್ ಲೀಗ್-ಕ್ಯೂ ಚುನಾವಣೆಯಲ್ಲಿ ಜಯಭೇರಿ ಗಳಿಸುತ್ತಿತ್ತು ಎಂದು ಮುಷ್ ಹೇಳಿದರು.

ಆದರೆ ಈ ಮಾತುಗಳೆಲ್ಲ ಬೆನಜೀರ್ ಹತ್ಯೆಯ ನಂತರ ತಪ್ಪಾಗಿ ಅರ್ಥೈಸಲಾಯಿತು ಎಂದು ಈ ಸಂದರ್ಭದಲ್ಲಿ ದೂರಿದರು. 2007 ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಬೃಹತ್ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಪಾಲ್ಗೊಂಡು ಭುಟ್ಟೋ ವಾಪಸ್ ಆಗುತ್ತಿದ್ದ ವೇಳೆಯಲ್ಲಿ ಬೆನಜೀರ್ ಮೇಲೆ ಗನ್ ಮತ್ತು ಬಾಂಬ್ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು.

ಮುಷರ್ರಫ್ ಅವರು ಐದು ವರ್ಷಗಳ ಕಾಲ ಪ್ರಜಾಸತ್ತಾತ್ಮಕ ಸರಕಾರದ ಆಡಳಿತ ನಡೆಸಬೇಕು ಎಂದು ಇಚ್ಚಿಸಿದ್ದರು. ಅಷ್ಟೇ ಅಲ್ಲ 2007ರ ಮಾರ್ಚ್‌ವರೆಗೂ ಮುಷ್ ಜನಪ್ರಿಯ ರಾಜಕಾರಣಿಯಾಗಿಯೇ ಇದ್ದರು. ಆದರೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ, ಪಾಕ್ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ ಇಫ್ತಾಕಾರ್ ಚೌಧರಿ ಅವರನ್ನು ವಜಾಗೊಳಿಸಿದ ಘಟನೆ ನಂತರ ಮುಷ್ ಜನಪ್ರಿಯತೆ ಮಣ್ಣುಪಾಲಾಯಿತು ಎಂದು ಟಿವಿ ವರದಿ ವಿಶ್ಲೇಷಿಸಿದೆ.
ಇವನ್ನೂ ಓದಿ