ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್:ಪ್ರಬಲ ಬಾಂಬ್ ಸ್ಫೋಟಕ್ಕೆ ಶಾಲೆ, ಸ್ಟೇಡಿಯಂ ಧ್ವಂಸ (Taliban | Pak tribal area | bomb Blast | stadium | school)
ಪ್ರಬಲ ಬಾಂಬ್ ಸ್ಫೋಟಕ್ಕೆ ಶಾಲೆ ಹಾಗೂ ಸ್ಟೇಡಿಯಂ ಸಂಪೂರ್ಣ ಧ್ವಂಸಗೊಂಡ ಘಟನೆ ಪಾಕಿಸ್ತಾನದ ನೈರುತ್ಯ ಭಾಗದ ಖೈಬರ್ ಬುಡಕಟ್ಟು ಪ್ರದೇಶದಲ್ಲಿ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖೈಬರ್ ಬುಡಕಟ್ಟು ಪ್ರದೇಶದಲ್ಲಿನ ಬಾರಾ ಪ್ರದೇಶದಲ್ಲಿನ ಶಾಲೆಯೊಂದರ ಸಮೀಪ ಇರುವ ಸ್ಟೇಡಿಯಂನಲ್ಲಿ ಉಗ್ರರು ಅಡಗಿಸಿಟ್ಟ ಪ್ರಬಲ ಬಾಂಬ್ ಸ್ಫೋಟಿಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಬಾಂಬ್ ಸ್ಫೋಟದ ಸಂದರ್ಭದಲ್ಲಿ ಶಾಲೆ ಮತ್ತು ಸ್ಟೇಡಿಯಂ ಕಟ್ಟಡಗಳಲ್ಲಿ ಯಾರೂ ಇಲ್ಲವಾಗಿತ್ತು. ಆದರೆ ಶಾಲೆ ಮತ್ತು ಸ್ಟೇಡಿಯಂ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದೆ. ಘಟನೆಯ ನಂತರ ಶೋಧ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಸ್ಫೋಟದ ಹಿಂದೆ ತಾಲಿಬಾನ್ ಪರ ಉಗ್ರರ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆದರೆ ಈವರೆಗೂ ಯಾವುದೇ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.
ಇವನ್ನೂ ಓದಿ