ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ: ಬೆಡ್‌ರೂಂನೊಳಗೆ ಕ್ಯಾಮರಾ ಅಳವಡಿಸಿಟ್ಟ ಜಡ್ಜ್ ವಜಾ (Bangladesh | Supreme Court | sacked a judge | camera)
ತನ್ನ ಸಹೋದ್ಯೋಗಿ ಬೆಡ್‌ರೂಂ ಒಳಗಡೆ ರಹಸ್ಯವಾಗಿ ಕೆಮರಾವನ್ನು ಅಳವಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರನ್ನು ವಜಾಗೊಳಿಸಿದೆ.

ಇಲ್ಯಾಸ್ ರಹಮಾನ್ ಅವರನ್ನು ಕಳೆದ ವರ್ಷ ಆಗೋಸ್ಟ್ ತಿಂಗಳಲ್ಲಿ ನೈರುತ್ಯ ಪ್ರಾಂತ್ಯದ ಬೆಗ್ರಾತ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ, ತಾನು ತನ್ನ ಸಹೋದ್ಯೋಗಿ ಬೆಡ್ ರೂಂ ಒಳಗೆ ರಹಸ್ಯವಾಗಿ ಕೆಮರಾವನ್ನು ಅಳವಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ತಾನು ಸಾಹಸ ಸಿನಿಮಾಗಳಿಂದ ಪ್ರಭಾವಿತನಾಗಿ ಈ ರೀತಿ ಮಾಡಿರುವುದಾಗಿ ರಹಮಾನ್ ವಿವರಿಸಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎಬಿಎಂ ಖೈರುಲ್ ಹಕ್ ಅವರನ್ನೊಳಗೊಂಡ ಪೀಠ, ಅನೈತಿಕ ನಡವಳಿಕೆ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ರಹಮಾನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ಆದೇಶ ನೀಡಿದ್ದಾರೆಂದು ಸುಪ್ರೀಂಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಇವನ್ನೂ ಓದಿ