ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಸೆಕ್ಸ್ ಸ್ಕ್ಯಾಂಡಲ್ ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಎಡೆಮಾಡಿಕೊಟ್ಟಿದ್ದು, ಮತ್ತೊಂದೆಡೆ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿಲು ಮುಂದಾದ ಸಂದರ್ಭದಲ್ಲಿ ನಾಯಿಯೊಂದು ರಕ್ಷಿಸಿದ ಘಟನೆ ಈಜಿಪ್ಟ್ನಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಮಿಲಾನ್ನ 14ರ ಹರೆಯದ ಬಾಲಕಿಯೊಬ್ಬಳು ನಾಯಿಯ ಜತೆ ಆಟವಾಡುತ್ತಿದ್ದ ಸಂದರ್ಭದಲ್ಲಿ 40ರ ಹರೆಯದ ವ್ಯಕ್ತಿಯೊಬ್ಬ (ನಾಯಿಯ ತರಬೇತುದಾರ) ಆಕೆಯನ್ನು ಭೇಟಿಯಾಗಿದ್ದ. ನಂತರ ಕಾಫಿ ಕುಡಿಯಲು ಬಾಲಕಿಯನ್ನು ಆಹ್ವಾನಿಸಿದ್ದ. ಕಾಫಿ ಕುಡಿದು ಆಕೆ ಹೊರಡುತ್ತಿದ್ದಂತೆಯೇ ಆತ ಆಕೆಯ ಕುತ್ತಿಗೆಯನ್ನು ಹಿಡಿದು ಅತ್ಯಾಚಾರ ನಡೆಸಲು ಯತ್ನಿಸಿದ್ದ ಎಂದು ವರದಿ ಹೇಳಿದೆ.
ತನ್ನ ತರಬೇತುದಾರ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಮುಂದಾದ ಸಂದರ್ಭದಲ್ಲಿ ನಾಯಿ ಆತನ ಮೇಲೆ ಎರಗಿ ಪ್ರತಿಭಟಿಸಿದಾಗ ಬಾಲಕಿ ಕಾಮುಕನ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.
ಘಟನೆಯ ನಂತರ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ಖಚಿತವಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಐದು ತಿಂಗಳ ಕಾಲ ತನಿಖೆ ನಡೆಸಿದ ನಂತರ ಯುವತಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ ವ್ಯಕ್ತಿಯನ್ನು ಸೆರೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ.