ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದೇಶಿ ಚಾನೆಲ್ಸ್‌ಗಳು ನಾಯಿ ಎಂದ ಗಡ್ಡಾಫಿ! (Muammar Gaddafi | Libya | oreign channels dogs | Venezuela)
ಸುಮಾರು 41 ವರ್ಷಗಳ ಕಾಲದಿಂದ ದೇಶವನ್ನು ಆಳುತ್ತಿರುವ ಲಿಬಿಯಾ ಅಧ್ಯಕ್ಷ ಮೊಮರ್ ಗಡ್ಡಾಫಿ ವಿರುದ್ಧ ಸಾರ್ವಜನಿಕರು ತಿರುಗಿ ಬಿದ್ದು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸ್ಟೇಟ್ ಟೆಲಿವಿಷನ್‌ನಲ್ಲಿ ಕಾಣಿಸಿಕೊಂಡಿರುವ ಗಡ್ಡಾಫಿ, ತಾನು ದೇಶ ಬಿಟ್ಟು ಎಲ್ಲಿಯೂ ಹೋಗಿಲ್ಲ. ಆದರೆ ವಿದೇಶಿ ಚಾನೆಲ್ಸ್‌ಗಳು 'ನಾಯಿ' ತರ ವರ್ತಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಟ್ರೈಪೋಲಿಯಲ್ಲಿಯೇ ಇದ್ದೇನೆ, ವೆನಿಜುವೆಲಾಕ್ಕೆ ಹೋಗಿಲ್ಲ. ನೀವು ಆ ವಿದೇಶಿ ಚಾನೆಲ್ಸ್‌ಗಳ ಸುದ್ದಿಯನ್ನು ನಂಬಬೇಡಿ. ಯಾಕೆಂದರೆ ಅವುಗಳೆಲ್ಲ ನಾಯಿಗಳು ಎಂದು ಲಿಬಿಯಾ ಟಿವಿ ಚಾನೆಲ್‌ವೊಂದರಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

68ರ ಹರೆಯದ ಗಡ್ಡಾಫಿ ಅವರು ಹಳೆಯ ಬಿಳಿ ಬಣ್ಣದ ವ್ಯಾನ್‌ವೊಂದರಲ್ಲಿ ದೊಡ್ಡ (ಮಳೆಯ ಹಿನ್ನೆಲೆಯಲ್ಲಿ) ಕೊಡೆಯೊಂದನ್ನು ಹಿಡಿದುಕೊಂಡು, ಲಿಬಿಯಾ ಟಿವಿಯಲ್ಲಿ ಮಾತನಾಡುತ್ತ ತಾನು ವೆನಿಜುವೆಲಾಕ್ಕೆ ಓಡಿ ಹೋಗಿದ್ದೇನೆ ಎಂಬ ವಿದೇಶಿ ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದರು.

ಲಿಬಿಯಾದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ದೇಶದ ಹಲವು ಪ್ರಮುಖ ನಗರಗಳನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದು, ರಾಜಧಾನಿ ಟ್ರಿಪೋಲಿ ತಲುಪಿದ್ದಾರೆ. ಇದರಿಂದ ಆತಂಕಗೊಂಡಿರುವ ಮುಖಂಡ ಮೊಮರ್ ಗಢಾಫಿ ಅವರು ಪಲಾಯನ ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ನಾಲ್ಕು ದಶಕಗಳಿಂದ ಗಢಾಫಿ ಅವರ ನಿರಂಕುಶ ಅಧಿಕಾರ ನೋಡುತ್ತಿರುವ ದೇಶದಲ್ಲಿ ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಇದಕ್ಕೆ ಪ್ರತಿಯಾಗಿ ಲಿಬಿಯಾದ ಭದ್ರತಾ ಪಡೆಗಳು ಸಹ ಪ್ರತಿಭಟನಾಕಾರರನ್ನು ದಮನಿಸುವ ಕಾರ್ಯ ಕೈಗೊಂಡಿದೆ. ಏತನ್ಮಧ್ಯೆ ಲಿಬಿಯಾ ಅಧ್ಯಕ್ಷ ಮೊಮರ್ ಗಡ್ಡಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗಡ್ಡಾಫಿ, ಸರಕಾರದ ಯೋಜನೆಗಳನ್ನು ಒಪ್ಪಿಕೊಂಡು ಸುಮ್ಮನಿರಿ. ಇಲ್ಲದಿದ್ರೆ ರಕ್ತದ ಕೋಡಿ ಹರಿಯಲಿದೆ ಎಂದು ಪ್ರತಿಭಟನಾಕಾರರನ್ನು ಎಚ್ಚರಿಸಿದ್ದಾನೆ.

ಟ್ರಿಪೋಲಿಯಲ್ಲಿ ಯುದ್ಧವಿಮಾನಗಳು ಪ್ರತಿ ಭಟನಾಕಾರರತ್ತ ಗುಂಡು ಹಾರಿಸಿವೆ ಎಂದೂ ಕೆಲವು ವರದಿಗಳು ತಿಳಿಸಿವೆ. ಇಲ್ಲಿನ ಎಲ್ಲಾ ನಿಸ್ತಂತು ಸಂಪರ್ಕ ವ್ಯವಸ್ಥೆ ಕಡಿದುಹೋಗಿದೆ ಎಂದೂ ಹೇಳಲಾಗಿದೆ.
ಇವನ್ನೂ ಓದಿ