ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್: ಬೇರೆ ಧರ್ಮ ಬೋಧಿಸಿದ ಶಿಕ್ಷಕರ ಮೇಲೆ ಹಲ್ಲೆ (London | Muslim | attacked teacher | Snares brook Crown Court | religious attack)
ಮುಸ್ಲಿಂ ಯುವತಿಯರಿಗೆ ಬೇರೆ ಧರ್ಮದ ಪಾಠ ಹೇಳಿಕೊಟ್ಟ ಕಾರಣಕ್ಕೆ ಇಲ್ಲಿನ ಶಾಲೆಯೊಂದರ ಅಧ್ಯಾಪಕರನ್ನು ಅಮಾನುಷವಾಗಿ ಮಾರಕಾಸ್ತ್ರದಿಂದ ಥಳಿಸಿ ಅವರ ದವಡೆಯನ್ನು ಮುರಿದ ಪ್ರಕರಣದ ನಡೆದಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಅಕ್ಮೊಲ್ ಹುಸೈನ್ (26), ಶೇಕ್ ರಷೀದ್ (27), ಅಜಾದ್ ಹುಸೈನ್ (25) ಮತ್ತು ಸಿಮೊನ್ ಅಲಂ (19) ಅವರು ಅಧ್ಯಾಪಕ ಗ್ಯಾರಿ ಸ್ಮಿತ್ ಅವರ ಮೇಲೆ ಚಾಕು, ಸಿಮೆಂಟ್ ಇಟ್ಟಿಗೆ, ಕಬ್ಬಿಣದ ರಾಡ್‌ ಬಳಸಿ ಕ್ರೂರವಾಗಿ ಹಲ್ಲೆ ಮಾಡಿದ್ದರು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಅಧ್ಯಾಪಕರ ಮೇಲೆ ನಡೆದ ದಾಳಿಯನ್ನು ಡಿಟೆಕ್ಟಿವ್‌ಗಳು ಸೆರೆ ಹಿಡಿದಿದ್ದು ಅದರಲ್ಲಿ ಆರೋಪಿಗಳು ತಮ್ಮ ಸಹೋದರಿಯರಿಗೆ ಬೇರೆ ಧರ್ಮವನ್ನು ಬೋಧಿಸಿದ್ದನ್ನು ಖಂಡಿಸಿರುವುದನ್ನು ಸ್ನೇರ್ಸ್‌ ಬ್ರೂಕ್‌ನ ಕ್ರೌನ್ ಕೋರ್ಟ್ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆಲಿಸಿದೆ.

ಕಳೆದ ವರ್ಷ ಜುಲೈ 12 ರಂದು ಬರ್ಡೆಟ್ ರಸ್ತೆಯಲ್ಲಿ ಅಧ್ಯಾಪಕರು ಏಕಾಂಗಿಯಾಗಿ ಹೋಗುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿತ್ತು ಎಂದು ವರದಿಯಾಗಿದೆ.

ಒಟ್ಟಾರೆ ಈ ದಾಳಿ ಧಾರ್ಮಿಕ ಪ್ರಚೋದನೆಯಿಂದ ನಡೆದಿದೆ ಎಂದು ತನಿಖಾ ವರದಿಯಿಂದ ಗಮನಕ್ಕೆ ಬರುತ್ತದೆ ಎಂದು ಫಿರ್ಯಾದುದಾರ ಸಾರಾ ವೈಟ್ ಹೌಸ್ ತಿಳಿಸಿದ್ದಾರೆ.
ಇವನ್ನೂ ಓದಿ