ಬಾರ್ಸಿಲಿಯಾ, ಶುಕ್ರವಾರ, 25 ಫೆಬ್ರವರಿ 2011( 15:19 IST )
ಅತೀ ಹೆಚ್ಚು ಹತ್ಯೆಗಳು ನಡೆಯುವ ನೂರು ದೇಶಗಳ ಪಟ್ಟೆಯಲ್ಲಿ ಬ್ರೆಜಿಲ್ 6ನೇ ಸ್ಥಾನ ಗಿಟ್ಟಿಸಿಕೊಂಡಿರುವುದಾಗಿ ಸರಕಾರಿ ಪ್ರಾಯೋಜಿತ ನೂತನ ಸಮೀಕ್ಷಾ ವರದಿಯೊಂದು ತಿಳಿಸಿದೆ.
ಲ್ಯಾಟೀನ್ ಅಮೆರಿದ ದೇಶದಲ್ಲಿ 2014ರಲ್ಲಿ ವಿಶ್ವಕಪ್ ಹಾಗೂ 2016ರಲ್ಲಿ ಒಲಿಂಪಿಕ್ ಗೇಮ್ಸ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಎಲ್ ಸಲ್ವಾಡಾರ್, ಕೊಲೊಂಬಿಯಾ, ವೆನಿಜುವೆಲಾ, ಗ್ವಾಟೇಮಾಲಾ ಮತ್ತು ದ್ವೀಪಪ್ರದೇಶಗಳಲ್ಲಿ ಅತೀ ಹೆಚ್ಚು ಜನಾಂಗೀಯ ಹತ್ಯೆ ನಡೆಯುತ್ತಿರುವುದಾಗಿ ವರದಿ ವಿವರಿಸಿದೆ.
1998-2008ರಲ್ಲಿ ಬ್ರೆಜಿಲ್‌ನಲ್ಲಿ ಅರ್ಧ ಮಿಲಿಯನ್ ಜನರನ್ನು ಹತ್ಯೆಗೈಯಲಾಗಿದೆ. ಸಾವನ್ನಪ್ಪಿದವರಲ್ಲಿ 15ರಿಂದ 24ರ ವಯಸ್ಸಿನ ಯುವಕರೇ ಸೇರಿದ್ದಾರೆ ಎಂದು ವರದಿ ಹೇಳಿದೆ.