ಇಸ್ಲಾಮಾಬಾದ್, ಭಾನುವಾರ, 27 ಫೆಬ್ರವರಿ 2011( 09:26 IST )
ಅಮೆರಿಕ ಏಜೆಂಟ್ಸ್‌ಗಳ ನೆಟ್ವರ್ಕ್ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿಕೊಂಡಿರುವುದಾಗಿ ಪಾಕಿಸ್ತಾನ ಆರ್ಮಿಯ ಮಾಜಿ ಸಿಬ್ಬಂದಿ ನಿವೃತ್ತ ಜನರಲ್ ಮಿರ್ಜಾ ಅಸ್ಲಾಮ್ ಬೇಗ್ ಗಂಭೀರವಾಗಿ ಆರೋಪಿಸಿದ್ದು, ಅವರ ಮುಂದಿನ ಗುರಿ ಪಾಕ್‌ನ ವಿವಾದಿತ ಪರಮಾಣು ವಿಜ್ಞಾನಿ ಡಾ.ಅಬ್ದುಲ್ ಖಾದೀರ್ ಖಾನ್ ಎಂದು ತಿಳಿಸಿದ್ದಾರೆ.
ಪರಮಾಣು ವಿಜ್ಞಾನಿ ಡಾ.ಎ.ಕ್ಯೂ.ಖಾನ್ ಅವರು ಅಮೆರಿಕ ಏಜೆಂಟ್ಸ್ ಮುಂದಿನ ಗುರಿ ಎಂದು ಜನರಲ್ ಬೇಗ್ ಹೇಳಿರುವುದಾಗಿ ದಿ ನೇಷನ್ ವರದಿ ಮಾಡಿರುವುದಾಗಿ ಟಿವಿ ಚಾನೆಲ್‌ವೊಂದು ಹೇಳಿದೆ.
ಅಮೆರಿಕದ ಏಜೆಂಟ್ಸ್‌ಗಳು ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರ ಸೂಚನೆಯಂತೆ ಕರಾಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಎ.ಕ್ಯೂ.ಖಾನ್ ಅವರು ಪಾಕಿಸ್ತಾನ ಪರಮಾಣು ಶಕ್ತಿಯ ಜನಕ, ಆದರೆ ಅವರು ಚೀನಾ, ಉತ್ತರ ಕೊರಿಯಾ ಮತ್ತು ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯ ಮಾಹಿತಿಯನ್ನು ಅಕ್ರಮವಾಗಿ ರವಾನಿಸಿದ್ದಾರೆಂಬ ಆರೋಪ ಹೊತ್ತಿದ್ದಾರೆ. ಏತನ್ಮಧ್ಯೆ ನಾವು ಪಾಕಿಸ್ತಾನದ ಜತೆ ಸೂಕ್ಷ್ಮವಾಗಿ ವ್ಯವಹರಿಸುತ್ತಿರುವುದಾಗಿ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ.ಕ್ರೌಲೈ ಕಳೆದ ವರ್ಷ ಆಗೋಸ್ಟ್‌ನಲ್ಲಿ ತಿಳಿಸಿದ್ದರು.