ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್: ಮಗಳಿಗೆ ಮಗು ಹೆತ್ತು ಕೊಟ್ಟ 'ಹಿರಿಯ ಅಮ್ಮ' (UK | oldest surrogate mum | giving birth | Pamela Butler | Nichola)
'57ರ ಹರೆಯದ ಅಮ್ಮನೇ ಮಗಳಿಗೆ ಮಗುವನ್ನು ಹೆತ್ತು ಕೊಟ್ಟಿರುವ ಅಪರೂಪದ ಘಟನೆ ಬ್ರಿಟನ್‌ನಲ್ಲಿ ನಡೆದಿದ್ದು, ಆ ಮೂಲಕ ಈ ತಾಯಿ ಹಿರಿಯ 'ಬಾಡಿಗೆ ತಾಯಿ' (ಸರೋಗೆಟ್ ಮದರ್) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಗಳಾದ ನಿಕೋಲಾಸ್ ತಾಯಿಯಾಗಲು ಅಸಮರ್ಥಳು ಎಂದು ವೈದ್ಯರು ತಿಳಿಸಿದ್ದರು. ಇದರಿಂದಾಗಿ ಮಗು ಬೇಕೆಂಬ ಮಗಳ ಬೇಡಿಕೆಯನ್ನು ಈಡೇರಿಸಲು ತಾಯಿ ಪಮೇಲಾ ಬಟ್ಲೆರ್ ಮುಂದಾಗಿದ್ದರು. ಅದರಂತೆ ಮಗಳಿಗೆ ಬಾಡಿಗೆ ತಾಯಿಯಾಗಲು ತಾಯಿ ಒಪ್ಪಿಗೆ ಕೊಟ್ಟಿದ್ದರು.

ಈ ಪ್ರಕ್ರಿಯೆ ಆರಂಭವಾಗಿದ್ದು 2006ರ ಏಪ್ರಿಲ್ ತಿಂಗಳಿನಲ್ಲಿ, ವೈದ್ಯರು ಬಟ್ಲೆರ್ ಅವರ ಆರೋಗ್ಯವನ್ನು ಪರೀಕ್ಷಿಸಿದ ನಂತರ ಗರ್ಭಿಣಿಯಾಗಲು ಯಾವುದೇ ತೊಂದರೆ ಇಲ್ಲ ಎಂದು ಗ್ರೀನ್ ಸಿಗ್ನಲ್ ನೀಡಿದ್ದರು.

ಇದೀಗ 57ರ ಹರೆಯದ ಅಜ್ಜಿಯೇ ಆರೋಗ್ಯವಂತ ಮೊಮ್ಮ(ಮ)ಗುವಿಗೆ ಜನ್ಮ ನೀಡಿದ್ದಾರೆ. ಪಮೇಲಾಗೆ ಐವಿಎಫ್ ಮೂಲಕ ನಿಕೋಲಸ್ ಗಂಡನ ವೀರ್ಯವನ್ನು ಸಂಗ್ರಹಿಸಿ ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬಟ್ಲೆರ್ ಗರ್ಭಾಶಯಕ್ಕೆ ಸೇರಿಸಲಾಗಿತ್ತು.

ಆರಂಭದಲ್ಲಿ ಮಗಳು ಈ ಪ್ರಸ್ತಾಪ ಇಟ್ಟಾಗ ನನಗೆ ನನ್ನ ವಯಸ್ಸಿನಿಂದಾಗಿ ತುಂಬಾ ಹೆದರಿಕೆ ಆಗಿತ್ತು. ಆದರೆ ನನ್ನ ಮಗಳಿಗೆ ಸಹಾಯ ಮಾಡಲು ಯಾವುದೇ ಅಳುಕು ಇರಲಿಲ್ಲವಾಗಿತ್ತು ಎಂದು ಬಟ್ಲೆರ್ ತಿಳಿಸಿದ್ದಾರೆ. 'ಇದು ನಾನು ನನ್ನ ಮಗಳಿಗೆ ನೀಡಿರುವ ಅತ್ಯಂತ ದೊಡ್ಡ ಕೊಡುಗೆ' ಎಂದು ಬಟ್ಲೆರ್ ಹೇಳಿರುವುದಾಗಿ ದಿ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಇವನ್ನೂ ಓದಿ