ಚೀನಾದ ಜನಸಂಖ್ಯೆ ಕಳೆದ ವರ್ಷ 1.34 ಬಿಲಿಯನ್‌ಗೆ ಏರಿಕೆ ಕಂಡಿರುವುದಾಗಿ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಸೋಮವಾರ ತಿಳಿಸಿದ್ದು, ಆ ನಿಟ್ಟಿನಲ್ಲಿ ಚೀನಾ ದಂಪತಿಗಳಿಗೆ ಒಂದೇ ಮಗು ಎಂಬ ನೀತಿಯನ್ನು ಸಡಿಲಿಕೆ ಮಾಡಬೇಕೆಂದು ಸಲಹೆಯನ್ನು ನೀಡಿದೆ.
ಚೀನಾದ ಜನಸಂಖ್ಯೆ 1.3410 ಬಿಲಿಯನ್‌ನಷ್ಟು ಹೆಚ್ಚಳವಾಗಿದೆ ಎಂಬುದು ಪ್ರಾಥಮಿಕ ಮತ್ತು ಸಾಮಾನ್ಯ ಸಮೀಕ್ಷೆಯಿಂದ ತಿಳಿದು ಬಂದಿದೆ. 2009ರ ಅಂತ್ಯದ ವೇಳೆ 1.3347 ಬಿಲಿಯನ್ ಆಗಿತ್ತು ಎಂದು ಚೀನಾ ತಿಳಿಸಿದ್ದು, 2010ರಲ್ಲಿನ ನೂತನ ಅಂಕಿ-ಅಂಶವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದೆ.
ಹಾಗಾಗಿ ಚೀನಾ ಸರಕಾರ ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ದಂಪತಿಗಳಿಗೆ ಒಂದೇ ಮಗು ಎಂಬ ನೀತಿಯನ್ನು ಸಡಲಿಕೆ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಚೀನಾದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ 1979ರಲ್ಲಿ ಸರಕಾರ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದಿತ್ತು.