ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಹರೈನ್:ಪ್ರತಿಭಟನಾಕಾರರಿಂದ ಸಂಸತ್‌ಗೆ ಮುತ್ತಿಗೆ (Bahrain Monarchy | Protesters block Parliament | hand-picked envoys | Inter National Politics)
ಬಹರೈನ್:ಪ್ರತಿಭಟನಾಕಾರರಿಂದ ಸಂಸತ್‌ಗೆ ಮುತ್ತಿಗೆ
ಮನಾಮಾ, ಮಂಗಳವಾರ, 1 ಮಾರ್ಚ್ 2011( 14:45 IST )
ಆಡಳಿತ ಪಕ್ಷಗಳು ಕೈ ಎತ್ತುವ ಮೂಲಕ ಬಹುಮತ ಸಾಬೀತು ಪಡಿಸಿ ರಾಯಭಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಕ್ರಮವನ್ನು ವಿರೋಧಿಸಿ, ಬಹರೈನ್ ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಿ ಸಭೆಯನ್ನು ಅಡ್ಡಿಪಡಿಸಿರುವ ಸರ್ಕಾರಿ ವಿರೋಧಿ ನೂರಾರು ಪ್ರತಿಭಟನಾಕಾರರು, ವಿಶ್ವಾಸ ಮತ ಸಭೆಯನ್ನು ರದ್ದುಗೊಳಿಸಲು ಒತ್ತಾಯಿಸಿದ್ದಾರೆ.
ರಾಜಧಾನಿ ಮನಾಮಾದ ಸೂಕ್ಷ್ಮ ಪ್ರದೇಶಗಳಲ್ಲಿ ಜನರನ್ನು ಕ್ರಾಂತಿಯೆಬ್ಬಿಸಲು ನಡೆಸುತ್ತಿರುವ ಒಳಸಂಚು ಇದಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ರಾಜಪ್ರಭುತ್ವದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಕಳೆದ ಎರಡು ವಾರಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಪ್ರತಿಭಟನಾಕಾರರ ಆಕ್ರಮಣಕ್ಕೆ ಸೋಮವಾರ ಬಹರೈನ್ ಪಾರ್ಲಿಮೆಂಟ್ ಗುರಿಯಾಯಿತು. ಬಹರೈನ್ ಆಡಳಿತಾಧಿಕಾರಿಯಿಂದ ಆಯ್ಕೆಯಾದ 40 ಸದಸ್ಯರು ಪಾರ್ಲಿಮೆಂಟ್‌ನ ಮೇಲ್ಮನೆ ಸಭೆ ಕರೆದಿದ್ದರು. ಪಾರ್ಲಿಮೆಂಟ್‌ನ ಮುಂಭಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಗಿಳಿದ ನಂತರ ಸಭೆಯನ್ನು ರದ್ಧುಗೊಳಿಸಲಾಯಿತು. ಮಾತುಕತೆ ಮೂಲಕ ಪ್ರಕ್ಷುಬ್ಧ ವಾತಾವರಣವನ್ನು ತಹಬದಿಗೆ ತರಲು ಬಹರೈನ್ ರಾಜಪ್ರಭುತ್ವ ವಿರೋಧ ಪಕ್ಷಕ್ಕೆ ಮನವಿ ಮಾಡಿದೆ.