ಭೂಮಿ, ಮನೆ, ಪ್ರಕೃತಿ ಸೌಂದರ್ಯದ ದ್ವೀಪ ಪ್ರದೇಶ ಹೀಗೆ ಎಲ್ಲದಕ್ಕೂ ಬೆಲೆ ಕಟ್ಟುವುದು ಸಾಮಾನ್ಯ. ಆದರೆ ಇದೀಗ ಭೂಮಿಯ ಒಟ್ಟು ಮೌಲ್ಯ 3,000 ಟ್ರಿಲಿಯನ್ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. (1ಟ್ರಿಲಿಯನ್ = ಒಂದು ಲಕ್ಷ ಕೋಟಿ- 1 ಪೌಂಡು= ಸಾಮಾನ್ಯವಾಗಿ 75ರೂಪಾಯಿ)
ಎಲ್ಲಾ ಗ್ರಹಗಳ ಕಾಲಾವಧಿ, ಗಾತ್ರ, ತಾಪಮಾನ, ರಾಶಿ, ಇನ್ನಿತರ ಅಗತ್ಯ ಮಾಹಿತಿಗಳ ಅಂಕಿ-ಅಂಶಗಳನ್ನು ಭೌತವಿಜ್ಞಾನಿ ಗ್ರೆಗ್ ಲಾಫ್ಲಿನ್ ಅವರು ಕಲೆ ಹಾಕಿದ್ದು ಅವೆಲ್ಲ ಗ್ರಹಗಳಲ್ಲಿ ಭೂಮಿಯ ಮೌಲ್ಯ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.
ಮಂಗಳ ಗ್ರಹದ ಮೌಲ್ಯ 10,000 ಪೌಂಡ್ ಹಾಗೂ ಶುಕ್ರ ಗ್ರಹದ ಮೌಲ್ಯ ಒಂದು ಪೆನ್ನಿಗಿಂತ ಕಡಿಮೆ. ಇದಲ್ಲದೆ ಪ್ರಸ್ತುತ ಇರುವ 1,235 ಕ್ಕಿಂತಲೂ ಹೆಚ್ಚಿನ ಗ್ರಹಗಳಿಗೆ ಬೆಲೆ ನಿಗದಿ ಮಾಡಿಲ್ಲ. ಯಾಕೆಂದರೆ ಆ ಗ್ರಹಗಳು ಬೆಲೆ ನಿಗದಿ ಪರಿದಿಯೊಳಗೆ ಬರುವುದಿಲ್ಲವಂತೆ!
ನಾಸಾ ಪತ್ತೆಹಚ್ಚಿದ ಮಾಹಿತಿಯನ್ವಯ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಭೌತವಿಜ್ಞಾನಿ ಗ್ರೆಗ್ ಲಾಫ್ಲಿನ್ ಅವರು ಗ್ರಹಗಳಿಗೆ ಬೆಲೆ ಅಂದಾಜಿಸಿದ್ದಾರೆ.