ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯೆಮೆನ್‌ ಪ್ರತಿಭಟನೆ; ಐವರು ಗವರ್ನರ್‌ ವಜಾಗೊಳಿಸಿದ ಅಧ್ಯಕ್ಷ (Yemeni | Ali Abdullah Saleh | sacks Governors | President)
ಯೆಮೆನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರ ಪದಚ್ಯುತಿಗೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಅಲಿ ದೇಶದ ಐದು ರಾಜ್ಯಪಾಲರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.

ಯೆಮೆನ್‌ ದಕ್ಷಿಣದ ಅಡೆನ್, ಲಾಹಿಜಿ ಹಾಗೂ ಅಬ್ಯಾನ್ ಪ್ರಾಂತ್ಯದ ಹಾಗೂ ಆಗ್ನೇಯ ಹರ್ದಾಮುತ್, ಪಶ್ಚಿಮದ ಹುದಾಯಾದಾ ಪ್ರಾಂತ್ಯದ ರಾಜ್ಯಪಾಲರನ್ನು ವಜಾಗೊಳಿಸಿರುವುದಾಗಿ ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ.

ಯೆಮೆನ್‌ನಲ್ಲಿ ಚುನಾವಣೆ ನಡೆಯುವರೆಗೆ ಸಮ್ಮಿಶ್ರ ಸರಕಾರ ರಚನೆಗೆ ಸಲೇಹಾ ಅವರು ನೀಡಿದ ಕರೆಯನ್ನು ಪ್ರಮುಖ ವಿರೋಧ ಪಕ್ಷ ತಿರಸ್ಕರಿಸಿದ್ದ ಬೆನ್ನಲ್ಲೇ ಅಲಿ ವಿರುದ್ಧ ಪ್ರತಿಭಟನೆ ಆರಂಭಗೊಂಡಿತ್ತು. ಆದರೆ ಇದೇ ವೇಳೆ ಇದನ್ನು ವಿರೋಧಿಸಿ ಸರಕಾರದ ಪರ ನಿಲುವು ಹೊಂದಿರುವ ಸಾವಿರಾರು ಮಂದಿ ಇಲ್ಲಿನ ತಹ್ರೀರ್ ಚೌಕದಲ್ಲಿ ಒಟ್ಟುಗೂಡಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇವನ್ನೂ ಓದಿ