ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿ ಪದತ್ಯಾಗ ಲಿಬಿಯಾಕ್ಕೆ ಒಳ್ಳೇದು: ಒಬಾಮಾ (Libya | Barack Obama | Moammar Gaddafi | US military | Mexican)
ಲಿಬಿಯಾದ ಸರ್ವಾಧಿಕಾರಿ ಅಧ್ಯಕ್ಷ ಮೊಮ್ಮರ್ ಗಡಾಫಿ ಅಧಿಕಾರ ತ್ಯಜಿಸುವಂತೆ ಸಾರ್ವಜನಿಕರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಮತ್ತೊಂದೆಡೆ ಲಿಬಿಯಾ ಪ್ರಕ್ಷುಬ್ಧ ಸ್ಥಿತಿಯನ್ನು ಗಮನಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಗಡಾಫಿ ಕೂಡಲೇ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ.

ಗಡಾಫಿ ತನ್ನದೇ ಪ್ರಜೆಗಳ ಮೇಲೆ ಸೇನಾಡಳಿತ ಹಿಂಸಾಚಾರ ನಡೆಸುತ್ತಿದ್ದು ರಕ್ತದೋಕುಳಿ ಹರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬರಾಕ್, ಆ ನಿಟ್ಟಿನಲ್ಲಿ ದೇಶದ ಒಳಿತಿಗಾಗಿ ಗಡಾಫಿ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುವುದು ಉತ್ತಮ ಎಂದು ಮತ್ತೊಮ್ಮೆ ಕರೆ ನೀಡಿದ್ದಾರೆ.

ಲಿಬಿಯಾ ಬಿಕ್ಕಟ್ಟು ಕುರಿತಂತೆ ನಾವು ಪ್ರತಿಯೊಂದು ಅವಕಾಶದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುತ್ತಿದೆ ಎಂದು ತಿಳಿಸಿರುವ ಅವರು, ಮಿಲಿಟರಿಯೇತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಗಡಾಫಿ ನೇತೃತ್ವದ ಮಿಲಿಟರಿ ಪಡೆ ಗುಂಡಿನ ದಾಳಿ ನಡೆಸುತ್ತಿದೆ. ಆದರೂ ತಾವು ತಮ್ಮ ಪ್ರಜೆಗಳ ಮೇಲೆ ಯಾವುದೇ ದಾಳಿ ನಡೆಸಿಲ್ಲ ಎಂದು ಗಡಾಫಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕರ ವಿರೋಧದ ನಡುವೆಯೂ ತಾನು ಅಧ್ಯಕ್ಷಗಾದಿಯಿಂದ ಕೆಳಗಿಳಿಯುವುದಿಲ್ಲ ಎಂದು ಹೇಳುವ ಮೂಲಕ ಲಿಬಿಯಾದಲ್ಲಿ ಪ್ರಕ್ಷ್ಯುಬ್ಧ ವಾತಾವರಣ ಸೃಷ್ಟಿಸಿದ್ದಾರೆ ಎಂದು ಬರಾಕ್ ದೂರಿದರು.

ಲಿಬಿಯಾದಲ್ಲಿನ ಬೆಳವಣಿಗೆ ಕುರಿತಂತೆ ನಾವು ಶ್ವೇತಭವನದಲ್ಲೇ ಕುಳಿತು ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಾವು ನ್ಯಾಟೋದ ಸಹಾಯದೊಂದಿಗೆ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು.
ಇವನ್ನೂ ಓದಿ