ದೇಶದ ಜನತೆಯಿಂದ ಭಾರಿ ಪ್ರತಿಭಟನೆಯನ್ನು ಎದುರಿಸುತ್ತಿರುವ ಲಿಬಿಯಾ ಅಧ್ಯಕ್ಷ ಮುವಾಮ್ಮರ್ ಗಡಾಫಿ, ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟ ನಿಲ್ಲದು. ಆದರೆ, ಪಾಶ್ಚಾತ್ಯ ರಾಷ್ಟ್ರಗಳು ಬೆಂಬಲ ನೀಡಿದಿರುವುದಕ್ಕೆ ಅಸಮಧಾನವಾಗಿದೆ ಎಂದು ಹೇಳಿದ್ದಾರೆ.
ಕರ್ನಲ್ ಗಡಾಫಿ, ಫ್ರೆಂಚ್ ಪತ್ರಿಕೆಗೆ ಸಂದರ್ಶನ ನೀಡಿ, ದೇಶದಲ್ಲಿ ಭಯೋತ್ಪಾನೆ ಶಕ್ತಿಗಳು ಅಟ್ಟಹಾಸ ನಡೆಸುತ್ತಿದ್ದರೂ ನೆರೆಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸದಿರುವುದರಿಂದ ನಿರಾಶೆಯಾಗಿದೆ ಎಂದು ತಿಳಿಸಿದ್ದಾರೆ.
ಲಿಬಿಯಾದಲ್ಲಿ ನಡೆಯುತ್ತಿರುವ ಹೋರಾಟ ಭಯೋತ್ಪಾದನೆಯ ವಿರುದ್ಧವಾಗಿದೆ. ಇತರ ರಾಷ್ಟ್ರಗಳು ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಇತರ ರಾಷ್ಟ್ರಗಳು ಸಹಕಾರ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಪಶ್ಚಿಮ ರಾಷ್ಟ್ರಗಳು ಬೆಂಬಲ ನೀಡದಿದ್ದಲ್ಲಿ, ಲಿಬಿಯಾದ ಸಹಸ್ರಾರು ಜನತೆಗೆ ಆಶ್ರನ ನೀಡುವಂತಹ ಸ್ಥಿತಿ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಪಶ್ಚಿಮ ರಾಷ್ಟ್ರಗಳು ಬೆಂಬಲ ನೀಡಬೇಕು. ಅಸ್ಥಿರವಾದ ಲಿಬಿಯಾ ಭಯೋತ್ಪಾದಕರ ತೆಕ್ಕೆಗೆ ಬೀಳಲಿದೆ ಎನ್ನುವ ಘೋರ ಸತ್ಯವನ್ನು ಅರಿಯಬೇಕು ಎಂದು ಕರ್ನಲ್ ಗಡಾಫಿ ತಿಳಿಸಿದ್ದಾರೆ.