ಮುಟ್ಟಾಹಿದಾ ಖ್ವಾಮಿ ಮೂವ್ಮೆಂಟ್(ಎಂಕ್ಯೂಎಂ) ಸದಸ್ಯ ಹಾಗೂ ಪಾಕಿಸ್ತಾನ ಪಂಜಾಬ್ನ ಸಿಂಧ್ ಪ್ರಾಂತ್ಯದ ಸಚಿವ ಮುಹಮ್ಮದ್ ಜುಬೈರ್ ಖಾನ್ ಅವರನ್ನು ಹತ್ಯೆಗೈಯುವ ಯತ್ನ ವಿಫಲವಾದ ಘಟನೆ ಸೋಮವಾರ ನಡೆದಿದೆ.
ಸಚಿವ ಖಾನ್ ಅವರನ್ನು ಇಲ್ಲಿನ ಹೈದೆರಾಬಾದ್ ಪ್ರದೇಶದಲ್ಲಿ ಅಪರಿಚಿತ ಗನ್ಮ್ಯಾನ್ವೊಬ್ಬ ಕೊಲ್ಲಲು ಯತ್ನಿಸಿದ್ದ. ಖಾನ್ ಅವರು ತಮ್ಮ ಮನೆಯ ಹೊರಭಾಗದಲ್ಲಿ ನಿಂತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಎಂದು ದಿ ನೇಷನ್ ಪತ್ರಿಕೆ ವರದಿ ಮಾಡಿದೆ.
ಆದರೆ ಅದೃಷ್ಟವಶಾತ್ ಸಚಿವರು ಅಪಾಯದಿಂದ ಪಾರಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದಾಳಿಕೋರ ತಪ್ಪಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.