ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಮಾಜಿ ಸಚಿವರ ಪತ್ನಿ ಅಪಹರಣ (Pakistan | former minister | abducted | Quetta | Nilofar Abadan,)
ಪಾಕಿಸ್ತಾನದ ಪ್ರಾಂತೀಯ ಮಾಜಿ ಸಚಿವರೊಬ್ಬರ ಪತ್ನಿಯನ್ನು ಅಪರಿಚಿತ ಶಸ್ತ್ರಧಾರಿ ವ್ಯಕ್ತಿಗಳು ಅಪಹರಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಅಲ್ಪಸಂಖ್ಯಾತ ಪಾರ್ಸಿ ಜನಾಂಗಕ್ಕೆ ಸೇರಿದ ಅವರ ಪತಿ ನಾಪತ್ತೆಯಾಗಿ ದಶಕಗಳೇ ಕಳೆದಿದ್ದು, ಇದೀಗ ಪತ್ನಿಯನ್ನೂ ಅಪಹರಿಸಲಾಗಿದೆ.

ಪ್ರಾಂತೀಯ ಮಾಜಿ ಸಚಿವ ಫಾರಿದೂನ್ ಅಬಾದಾನ್ ಅವರ ಪತ್ನಿ ನಿಲೋಫಾರ್ ಅಬಾದಾನ್ ಅವರನ್ನು ಪಾಕಿಸ್ತಾನ ವಾಯುವ್ಯ ಭಾಗದ ಕ್ವೆಟ್ಟಾ ಪ್ರದೇಶದಿಂದ ಶಸ್ತ್ರಾಸ್ತ್ರಧಾರಿ ವ್ಯಕ್ತಿಗಳು ಮಂಗಳವಾರ ಅಪಹರಿಸಿಕೊಂಡು ಹೋಗಿದ್ದಾರೆ.

ನಿಲೋಫಾರ್ ಉದ್ಯಮಿಯಾಗಿದ್ದು ಕ್ವೆಟ್ಟಾದಲ್ಲಿರುವ ತಮ್ಮ ಡಿಸ್ಟಿಲರಿಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಖೈವೆರಿ ರಸ್ತೆಯಲ್ಲಿಯೇ ಅಡ್ಡಗಟ್ಟಿ ಅಪಹರಿಸಿಕೊಂಡು ಹೋಗಿರುವುದಾಗಿ ಡಿಐಜಿ ಹಮೀದ್ ಶಾಕೀಲ್ ತಿಳಿಸಿದ್ದಾರೆ.

ಗುರ್ದತ್ ಸಿಂಗ್ ಚೌಕ್ ಸಮೀಪ ಆಕೆ ಕಾರನ್ನು ಅಡ್ಡಗಟ್ಟಿ ಅಪಹರಿಸಲಾಗಿತ್ತು. ಆಕೆಯ ಕಾರು ನಂತರ ಅಲ್ ಗಿಲಾನಿ ರಸ್ತೆಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಕ್ವೆಟ್ಟಾ ಪ್ರದೇಶದಲ್ಲಿ ಮಹಿಳಾ ಉದ್ಯಮಿಯೊಬ್ಬರನ್ನು ಅಪಹರಿಸಿದ ಪ್ರಥಮ ಪ್ರಕರಣ ಇದಾಗಿದೆ ಎಂದು ಹಮೀದ್ ವಿವರಿಸಿದ್ದಾರೆ.
ಇವನ್ನೂ ಓದಿ