ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿ 26 ಭಾರತೀಯ ಮೀನುಗಾರರ ಸೆರೆ (Pakistan | maritime | Indian fishermen | arrested | jail)
ದೇಶದ ಕರಾವಳಿ ಗಡಿಭಾಗವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದಡಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳು 26 ಭಾರತೀಯ ಮೀನುಗಾರರನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಳೆದ ರಾತ್ರಿ ಆರು ಬೋಟ್ಸ್‌ಗಳಲ್ಲಿ ಆಗಮಿಸಿದ್ದ ಭಾರತೀಯ ಮೀನುಗಾರರು ಪಾಕಿಸ್ತಾನದ ಕರಾವಳಿ ಭಾಗವನ್ನು ಪ್ರವೇಶಿಸಿದ್ದು, ಆ ಸಂದರ್ಭದಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಕರಾವಳಿ ರಕ್ಷಣಾ ಏಜೆನ್ಸಿ ವಿವರಿಸಿದೆ.

ಬಂಧಿತರನ್ನು ಕರಾಚಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಪ್ರತಿವರ್ಷ ಈ ರೀತಿ ಗಡಿಭಾಗವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆಂದು ಆರೋಪಿಸಿ ಮೀನುಗಾರರನ್ನು ಬಂಧಿಸುತ್ತಾರೆ. ಈ ಸಂದರ್ಭದಲ್ಲಿ ಕೆಲವರು ವರ್ಷಗಳ ಕಾಲ ಜೈಲುಶಿಕ್ಷೆ ನೀಡಿ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ.
ಇವನ್ನೂ ಓದಿ