ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ, ಯಾವುದೇ ಸಂದರ್ಭದಲ್ಲೂ ಮುಷ್ ಬಂಧನ (Britain | Pervez Musharraf | warrant | Pakistan | Benazir Bhutto,)
PTI
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಕೋರ್ಟ್ ಮಾಜಿ ಅಧ್ಯಕ್ಷ ಮುಷರ್ರಫ್ ವಿರುದ್ಧ ಬಂಧನದ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪಾಕ್ ಸರಕಾರ ಮುಷ್ ಬಂಧನಕ್ಕೆ ಸಹಕಾರ ನೀಡುವಂತೆ ಕೋರಿ ವಾರಂಟ್ ಅನ್ನು ಬ್ರಿಟನ್ ಗೃಹ ಕಚೇರಿಗೆ ವಾರಂಟ್ ಅನ್ನು ರವಾನಿಸಿದೆ.

ಮುಷರ್ರಫ್ ಬಂಧನಕ್ಕೆ ಬ್ರಿಟನ್ ಸಹಕಾರ ನೀಡಬೇಕೆಂದು ಕೋರಿ ಲಂಡನ್‌ನಲ್ಲಿರುವ ಪಾಕ್ ರಾಯಭಾರಿ ಮೂಲಕ ಮನವಿ ಮಾಡಿಕೊಂಡಿದ್ದು, ಬಂಧನದ ವಾರಂಟ್ ಅನ್ನು ಇಸ್ಲಾಮಾಬಾದ್‌ನಿಂದ ಫೆಡರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ ರವಾನಿಸಿದೆ. ಬ್ರಿಟನ್‌ನಲ್ಲಿರುವ ಪಾಕ್ ಹೈಕಮೀಷನ್ ಮಾರ್ಚ್ 9ರಂದು ವಾರಂಟ್ ಅನ್ನು ಸ್ವೀಕರಿಸಿ ಅದನ್ನು ಬ್ರಿಟನ್ ಹೋಮ್ ಆಫೀಸ್‌ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿ ರವಾನಿಸಲಾಗಿದೆ ಎಂದು ಪಾಕ್ ರಾಯಭಾರಿ ವಾಜಿದ್ ಶಂಸುಲ್ ಹಸನ್ ತಿಳಿಸಿದ್ದಾರೆ.

ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣದ ಕುರಿತು ಅಂತಿಮ ವಿಚಾರಣೆ ನಡೆಸಿದ ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ಕೋರ್ಟ್ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ವಿರುದ್ಧ ಮೂರನೇ ಬಾರಿಗೆ ಬಂಧನದ ವಾರಂಟ್ ಜಾರಿಗೊಳಿಸಿ, ಮಾರ್ಚ್ 19ರೊಳಗೆ ಮುಷ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಎಫ್ಐಎ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.

67ರ ಹರೆಯದ ಪರ್ವೆಜ್ ಮುಷರ್ರಫ್ 2008ರಲ್ಲಿ ಅಧ್ಯಕ್ಷಗಾದಿಯಿಂದ ಕೆಳಗಿಳಿದಿದ್ದರು. ನಂತರ ಸ್ವಯಂ ಗಡಿಪಾರಿನೊಂದಿಗೆ ಲಂಡನ್‌ಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಭುಟ್ಟೋ ಪ್ರಕರಣದಲ್ಲಿ ಮುಷ್ ತಲೆಮರೆಸಿಕೊಂಡ ಆರೋಪಿ ಎಂದು ಭಯೋತ್ಪಾದನಾ ನಿಗ್ರಹ ಕೋರ್ಟ್ ಘೋಷಿಸಿತ್ತು.
ಇವನ್ನೂ ಓದಿ