ಮಿಲಾನ್ ಸಮೀಪದ ಐಶಾರಾಮಿ ವಿಹಾರಗೃಹದಲ್ಲಿ ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರು ಮೊರೊಕ್ಕೊ ಅಪ್ರಾಪ್ತ ಬಾಲಕಿ ಜತೆ 13 ಬಾರಿ ಲೈಂಗಿಕ ಚಟುವಟಿಕೆ ನಡೆಸಿರುವುದಾಗಿ ಪ್ರಾಸಿಕ್ಯೂಟರ್ ತಿಳಿಸಿದ್ದು, ಈ ನಿಟ್ಟಿನಲ್ಲಿ ದಾಖಲೆಗಳನ್ನು ಕಲೆಹಾಕಿರುವ ಅವರು ಪ್ರಧಾನಿ ಜತೆ ಮೂವರು ಮಂದಿ ಶಾಮೀಲಾಗಿದ್ದು ಅವರನ್ನೂ ದೋಷಿ ಎಂದು ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ.
ಭೋಜನಕೂಟದ ಸಂದರ್ಭದಲ್ಲಿ ಈ ರಾಸಲೀಲೆ ನಡೆದಿರುವುದಾಗಿ ಏಳು ಪುಟಗಳ ದಾಖಲೆಯಲ್ಲಿ ಆರೋಪಿಸಲಾಗಿದೆ. ಕಾಮಪ್ರಚೋದಕ ಡ್ಯಾನ್ಸ್‌ನಲ್ಲಿ ಶಾಮೀಲಾಗಿರುವ ಪ್ರಧಾನಿ ಅವರು ಆ ಸಂದರ್ಭದಲ್ಲಿಯೇ ತನ್ನ ಸೆಕ್ಸ್ ಪಾರ್ಟನರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದೆ.
ಬೆರ್ಲುಸ್ಕೋನಿ ಸೆಕ್ಸ್ ಸ್ಕ್ಯಾಂಡಲ್ ತನಿಖೆಯನ್ನು ಪ್ರಾಸಿಕ್ಯೂಟರ್ಸ್ ಔಪಚಾರಿಕವಾಗಿ ಮುಕ್ತಾಯಗೊಳಿಸಿದ್ದಾರೆ. ಆದರೆ ಮೂರು ಮಂದಿ ಪಾರ್ಟ್‌ನರ್ ದೋಷಿ ಎಂದು ಪರಿಗಣಿಸಬೇಕಾಗಿದೆ ಎಂದು ವರದಿ ತಿಳಿಸಿದೆ.
ಸೆಕ್ಸ್ ಸ್ಕ್ಯಾಂಡಲ್ ಹಾಗೂ ತಮ್ಮ ಪ್ರಭಾವ ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಬೆರ್ಲುಸ್ಕೋನಿ ಮಿಲಾನ್‌ನಲ್ಲಿ ಏಪ್ರಿಲ್ 6ರಂದು ಪ್ರತ್ಯೇಕವಾಗಿ ವಿಚಾರಣೆ ಎದುರಿಸಲಿದ್ದಾರೆ. ಅಲ್ಲದೇ ಪ್ರಧಾನಿ ಮೂವರು ಆಪ್ತರ ಬಗ್ಗೆ ದೋಷರೋಪಣೆ ಕುರಿತಂತೆ ನ್ಯಾಯಾಧೀಶರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಏತನ್ಮಧ್ಯೆ ತನ್ನ ವಿರುದ್ಧದ ಸೆಕ್ಸ್ ಸ್ಕ್ಯಾಂಡಲ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪ್ರಧಾನಿ ಬೆರ್ಲುಸ್ಕೋನಿ ತಿಳಿಸಿದ್ದಾರೆ. ಮೊರೊಕ್ಕೊ ಯುವತಿ ರೂಬಿ ಕೂಡ ಈ ಆರೋಪವನ್ನು ಅಲ್ಲಗಳೆದಿದ್ದಾಳೆ. ತಾನು ಯಾವತ್ತೂ ವೇಶ್ಯಾವೃತ್ತಿ ಮಾಡಿಲ್ಲ ಎಂಬುದಾಗಿಯೂ ಕೂಡ ಸ್ಪಷ್ಟಪಡಿಸಿದ್ದಳು ಎಂದು ಸಿಲ್ವಿಯೋ ಪರ ವಕೀಲರು ತಿಳಿಸಿದ್ದಾರೆ.