ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದಾಳಿ ನಡೆಸಿದ್ರೆ ಅಲ್ ಖಾಯಿದಾಕ್ಕೆ ಸಾಥ್: ಯುಎಸ್‌ಗೆ ಗಡಾಫಿ! (Muammar Gaddafi | Libya | al-Qaida | Osama bin Laden | West)
ಸರಕಾರಿ ವಿರೋಧಿ ಬಂಡುಕೋರರ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಲಿಬಿಯಾ ಅಧ್ಯಕ್ಷ ಮೊಮ್ಮರ್ ಗಡಾಫಿ, ಪ್ರತಿಭಟನೆ ನಡೆಸುತ್ತಿರುವ ಉಗ್ರರು ಒಸಾಮಾ ಬಿನ್ ಲಾಡೆನ್ ಜತೆ ಸಂಪರ್ಕ ಹೊಂದಿದ್ದಾರೆ ಎಂದು ದೂರಿದರು. ಆದರೆ ಒಂದು ವೇಳೆ ಪಾಶ್ಚಿಮಾತ್ಯ (ಅಮೆರಿಕ) ದೇಶ ಲಿಬಿಯಾ ಮೇಲೆ ದಾಳಿ ನಡೆಸಿದ್ರೆ, ನಾವು ಅಲ್ ಖಾಯಿದಾ ಜತೆಯೇ ಕೈಜೋಡಿಸಿ ಧರ್ಮಯುದ್ಧ ಸಾರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಿಲಾನ್ ಮೂಲದ ದೈನಿಕವೊಂದಕ್ಕೆ ಲಿಬಿಯಾ ರಾಜಧಾನಿ ಟ್ರೈಪೋಲಿಯಲ್ಲಿ ನೀಡಿದ ಸಂದರ್ಶನದಲ್ಲಿ ಈ ಎಚ್ಚರಿಕೆಯನ್ನು ಗಡಾಫಿ ನೀಡಿದ್ದಾರೆ. ದೇಶದಲ್ಲಿನ ಪ್ರಸಕ್ತ ಬೆಳವಣಿಗೆಯಿಂದಾಗಿ ನೀವು (ಗಡಾಫಿ) ಇರಾಕ್ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ರೀತಿಯಲ್ಲೇ ಸಾವನ್ನಪ್ಪಬಹುದು ಎಂಬ ಭೀತಿ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ, ಇಲ್ಲ, ನಮ್ಮ ಹೋರಾಟ ಅಲ್ ಖಾಯಿದಾ ಉಗ್ರರ ವಿರುದ್ಧ ಎಂದು ಹೇಳಿದರು.

ಆದರೆ, ಈ ಸಂದರ್ಭದಲ್ಲಿ ಪಾಶ್ಚಾತ್ಯ ದೇಶ ಇರಾಕ್‌ನಲ್ಲಿ ಮಾಡಿದಂತೆ ಲಿಬಿಯಾದಲ್ಲಿಯೂ ಹದ್ದುಮೀರಿ ವರ್ತಿಸಿದರೆ, ನಾವು ಭಯೋತ್ಪಾದನೆ ವಿರುದ್ಧದ ಅಂತಾರಾಷ್ಟ್ರೀಯ ಮೈತ್ರಿಕೂಟದಿಂದ ಹೊರಬಂದು, ಅಲ್ ಖಾಯಿದಾ ಜತೆಯೇ ಕೈಜೋಡಿಸಿ ಧರ್ಮಯುದ್ಧ ಸಾರುವುದಾಗಿ ಗಡಾಫಿ ಗುಡುಗಿದ್ದಾರೆ.

ದೇಶದಲ್ಲಿ ಪ್ರತಿಭಟನೆ ನಡೆಸುವವರ ಜತೆ ಯಾವುದೇ ರೀತಿಯ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ಬಂಡುಕೋರರು ಯಾವ ತೆರನಾದ ಆಶವಾದ ಇಟ್ಟುಕೊಳ್ಳುವುದು ಬೇಡ. ಅವರಿಗೆ ಈಗ ಇರುವುದು ಎರಡೇ ಆಯ್ಕೆ, ಒಂದೋ ಶರಣಾಗಿ, ಇಲ್ಲವೇ ಓಡಿಹೋಗಿ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಇವನ್ನೂ ಓದಿ