ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಕೊನೆಗೂ ಸಿಐಎ ಗುತ್ತಿಗೆದಾರ ಡೇವಿಸ್ ಬಂಧಮುಕ್ತ (CIA contractor | Raymond Davis | court frees | Pakistan,)
ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಹತ್ಯೆಗೈದಿರುವ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಅಮೆರಿಕದ ಸಿಐಎ ಗುತ್ತಿಗೆದಾರ ರೇಮಂಡ್ ಡೇವಿಸ್‌ನನ್ನು ಮೃತ ಕುಟುಂಬಿಕರು ಕ್ಷಮಾದಾನ ನೀಡಿ ಆತನಿಂದ ಪರಿಹಾರ ಪಡೆದ ನಂತರ ಪಾಕಿಸ್ತಾನ ಕೋರ್ಟ್ ಆತನನ್ನು ಬುಧವಾರ ಬಂಧಮುಕ್ತಗೊಳಿಸಿದೆ.

ಶರಿಯಾ ಕಾನೂನಿನ್ವಯ ಮೃತರ ಕುಟುಂಬದ ಸದಸ್ಯರು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ, ತಾವು ಡೇವಿಸ್‌ನನ್ನು ಕ್ಷಮಿಸುವುದಾಗಿ ತಿಳಿಸಿದ್ದರು. ಅಲ್ಲದೇ ಡೇವಿಸ್ ಮೃತರ ಕುಟುಂಬಕ್ಕೆ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಕೋರ್ಟ್ ಬಿಡುಗಡೆ ಮಾಡಿದೆ ಎಂದು ಪ್ರಾಂತೀಯ ಸಚಿವ ರಾಣಾ ಸಾನೌಲ್ಲಾ ಜಿಯೋ ನ್ಯೂಸ್ ಚಾನೆಲ್‌ಗೆ ತಿಳಿಸಿದ್ದಾರೆ.

ಕೋರ್ಟ್ ಆದೇಶದ ನಂತರ ಡೇವಿಸ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಡೇವಿಸ್ ಎಲ್ಲಿಗೆ ಬೇಕಾದರೂ ತೆರಳಬಹುದಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದ ಸಿಐಎ ಗುತ್ತಿಗೆದಾರನಾಗಿರುವ ಡೇವಿಸ್ ಕಳೆದ ಜನವರಿ ತಿಂಗಳಿನಲ್ಲಿ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಗುಂಡಿಟ್ಟು ಹತ್ಯೆಗೈದಿದ್ದ. ತದನಂತರ ಪಾಕ್ ಪೊಲೀಸರು ಡೇವಿಸ್‌ನನ್ನು ಬಂಧಿಸಿದ್ದರು. ಇದರಿಂದಾಗಿ ಪಾಕಿಸ್ತಾನ ಮತ್ತು ಅಮೆರಿಕದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತ್ತು. ಡೇವಿಸ್ ಅಮೆರಿಕದ ರಾಯಭಾರಿ ಕಚೇರಿಯ ಉದ್ಯೋಗಿ, ಹಾಗಾಗಿ ಆತನನ್ನು ಕೂಡಲೇ ಬಂಧಮುಕ್ತಗೊಳಿಸುವಂತೆ ಅಮೆರಿಕ ಒತ್ತಡ ಹೇರಿತ್ತು. ಸಾಕಷ್ಟು ಆರೋಪ ಪ್ರತ್ಯಾರೋಪಗಳ ನಂತರ ಡೇವಿಸ್ ಸಿಐಎ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಅಮೆರಿಕ ಒಪ್ಪಿಕೊಂಡಿತ್ತು.

ಅಂತೂ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ, ಮೃತ ಕುಟುಂಬಗಳಿಗೆ ಪರಿಹಾರ ನೀಡುವ ಮೂಲಕ ಡೇವಿಸ್ ಬಂಧಮುಕ್ತಗೊಳ್ಳುವ ಮೂಲಕ ಅಮೆರಿಕ ಹಾಗೂ ಪಾಕ್ ನಡುವಿನ ಶೀತಲ ಗುದ್ದಾಟಕ್ಕೆ ತೆರೆಬಿದ್ದಂತಾಗದೆ.
ಇವನ್ನೂ ಓದಿ