ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: ಜಗತ್ತಿನ ಅತಿ ದುಬಾರಿ ಶ್ವಾನ; ಗಣಿ ಉದ್ಯಮಿ ಖರೀದಿ! (most expensive dog | Tibetan Mastiff | million pounds | coal magnate | China)
ಚೀನಾ: ಜಗತ್ತಿನ ಅತಿ ದುಬಾರಿ ಶ್ವಾನ; ಗಣಿ ಉದ್ಯಮಿ ಖರೀದಿ!
ಲಂಡನ್, ಗುರುವಾರ, 17 ಮಾರ್ಚ್ 2011( 13:33 IST )
ಟಿಬೆಟ್‌ನ ಮ್ಯಾಸ್ಟಿಫ್ ಶ್ವಾನವೊಂದನ್ನು ಚೀನಾದ ಗಲ್ಲಿದ್ದಲು ಗಣಿ ಉದ್ಯಮಿಯೊಬ್ಬರು ಸುಮಾರು ಒಂದು ಮಿಲಿಯನ್ ಪೌಂಡ್ಸ್ ನೀಡಿ ಖರೀದಿಸುವ ಮೂಲಕ ವಿಶ್ವದ ದುಬಾರಿ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೋಲು ಕಿವಿ, ಕೆಂಪು ಬಣ್ಣದ ಟಿಬೆಟಿಯನ್ ಮ್ಯಾಸ್ಟಿಫ್ ಜಗತ್ತಿನ ಅತ್ಯಂತ ಹಳೆಯ ತಳಿಯ ನಾಯಿಯಾಗಿದೆ. ಇದೀಗ ಚೀನಾದ ಗಣಿ ಉದ್ಯಮಿ ನಾಯಿಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿರುವುದಾಗಿ ಬ್ರಿಟನ್‌ನ ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಸುಮಾರು ಐದು ವರ್ಷಗಳ ಹಿಂದೆ ಟಿಬೆಟ್‌ನ ಮ್ಯಾಸ್ಟಿಫ್ ತಳಿ ಶ್ವಾನಕ್ಕೆ 5000 ಯುವಾನ್ ಬೆಲೆಗೆ ಮಾರಾಟವಾಗುತ್ತಿತ್ತು. ಆದರೆ ಅಚ್ಚರಿ ಎಂಬಂತೆ ಈ ತಳಿಯ ನಾಯಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಮ್ಯಾಸ್ಟಿಫ್ ತಳಿ ನಾಯಿ ಮಾರಾಟಗಾರ ಲೂ ಲಿಯಾಂಗ್ ಪತ್ರಿಕೆಗೆ ತಿಳಿಸಿದ್ದಾರೆ.
ದುಬಾರಿ ಬೆಲೆ ಕೊಟ್ಟು ಶ್ವಾನ ಖರೀದಿಸಿದ ಚೀನಾದ ಕೋಟ್ಯಧಿಪತಿಯ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ. 11 ತಿಂಗಳು ಪ್ರಾಯದ ಈ ಶ್ವಾನವನ್ನು ಅವರು 9,45,000 ಪೌಂಡ್ ನೀಡಿ ಖರೀದಿಸಿದ್ದಾರೆ ಎಂದು ವರದಿ ಮಾಡಿದೆ. ಅವರು ಆ ನಾಯಿಯನ್ನು ತುಂಬಾ ಪ್ರೀತಿಸುತ್ತಾರೆ ಎಂಬ ವಿಶ್ವಾಸವಿದೆ ಎಂಬುದಾಗಿ ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ.