ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರತಿಭಟನೆ; ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಬೌದ್ಧಸನ್ಯಾಸಿ (Tibetan monk | China | set himself on fire | protest | Dalai Lama)
ಸರಕಾರಿ ವಿರೋಧಿ ಪ್ರತಿಭಟನೆ ನಡೆಸುತ್ತಿದ್ದ ಟಿಬೆಟ್ ಮೂಲದ ಬೌದ್ಧ ಸನ್ಯಾಸಿಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಪಶ್ಚಿಮ ಚೀನಾದಲ್ಲಿ ನಡೆದಿದ್ದು, ಬೆಂಕಿ ಹಚ್ಚಿಕೊಂಡ ಸನ್ಯಾಸಿಯನ್ನು ಪೊಲೀಸರು ಮನಬಂದಂತೆ ಥಳಿಸಿ ಒದ್ದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಚೀನಾ ಸರಕಾರದ ವಿರುದ್ಧ ಸುಮಾರು ನೂರಾರು ಬೌದ್ಧ ಸನ್ಯಾಸಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿರುವುದಾಗಿ ಗಡಿಪಾರುಗೊಂಡ ಟಿಬೆಟಿಯನ್ ಸನ್ಯಾಸಿಯೊಬ್ಬರು ತಿಳಿಸಿರುವುದಾಗಿ ವರದಿ ವಿವರಿಸಿದ್ದು, ಬೆಂಕಿ ಹಚ್ಚಿಕೊಂಡ ಸನ್ಯಾಸಿ ಗುರುವಾರ ಬೆಳಿಗ್ಗೆ ಸಾವನ್ನಪ್ಪಿರುವುದಾಗಿ ಹೇಳಿದೆ.

ಇಲ್ಲಿನ ಸಿಚುವಾನ್ ಪ್ರಾಂತ್ಯದ ಅಬಾ ನಗರದ ಮುಖ್ಯಬೀದಿಯ ಕಿರಿಟಿ ಬೌದ್ದ ವಿಹಾರದ ಸಮೀಪ ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ 21ರ ಹರೆಯದ ಬೌದ್ದ ಸನ್ಯಾಸಿ ಪುಂಟ್‌ಸಾಗ್ ಬೆಂಕಿಹಚ್ಚಿಕೊಂಡಿದ್ದು, ಗುರುವಾರ ಬೆಳಿಗ್ಗೆ ಸಾವನ್ನಪ್ಪಿರುವುದಾಗಿ ಧರ್ಮಶಾಲಾದಲ್ಲಿನ ಸನ್ಯಾಸಿ ಕುಶೋ ತ್ಸೆರಿಂಗ್ ತಿಳಿಸಿದ್ದಾರೆ.

ಚೀನಾ ಟಿಬೆಟಿಯನ್‌ರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಟಿಬೆಟ್‌ನಲ್ಲಿ ಚೀನಾ ನಡೆಸುತ್ತಿರುವ ಅಧಿಕಾರದ ವಿರುದ್ಧ ಕಿರಿಟಿ ಬೌದ್ಧವಿಹಾರದ ಸನ್ಯಾಸಿಗಳು ತೀವ್ರವಾಗಿ ವಿರೋಧಿಸುತ್ತಲೇ ಬಂದಿದ್ದಾರೆ.

ಏತನ್ಮಧ್ಯೆ ಟಿಬೆಟ್ ಚೀನಾದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಮತ್ತೆ ಪುನರುಚ್ಚರಿಸಿದೆ. ಆದರೆ ಹಿಮಾಲಯನ್ ಪ್ರದೇಶ ಟಿಬೆಟ್ ಸ್ವತಂತ್ರ ದೇಶವಾಗಿದೆ ಎಂಬುದು ಟಿಬೆಟಿಯನ್‌ರ ಅಭಿಪ್ರಾಯ. ಚೀನಾ ಅದಕ್ಕೆ ಅವಕಾಶ ನೀಡದೆ ಅದರ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕುತ್ತಲೇ ಬಂದಿದೆ.
ಇವನ್ನೂ ಓದಿ