ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡೇವಿಸ್ ಬಿಡುಗಡೆ ರಾಷ್ಟ್ರೀಯ ದುರಂತ: ಪಿಎಂಎಲ್(ಎನ್) (Pakistan | Raymond Davis | PML-N | CIA | Lahore court)
ಅಮೆರಿಕದ ಸಿಐಎ ಏಜೆಂಟ್ ರೇಮಂಡ್ ಡೇವಿಸ್‌ನನ್ನು ಬಂಧಮುಕ್ತಗೊಳಿಸಿರುವುದು ರಾಷ್ಟ್ರೀಯ ದುರಂತ ಎಂದು ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷವಾದ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್(ಪಿಎಂಎಲ್-ಎನ್) ಗಂಭೀರವಾಗಿ ಆರೋಪಿಸಿದೆ.

ಆಡಳಿತಾರೂಢ ಪಾಕ್ ಸರಕಾರ ಅಮೆರಿಕದ ಒತ್ತಡಕ್ಕೆ ಮಣಿದು ಡೇವಿಸ್‌ನನ್ನು ಬಿಡುಗಡೆ ಮಾಡಿರುವುದು ದೇಶದ ಇತಿಹಾಸದಲ್ಲಿನ ರಾಷ್ಟ್ರೀಯ ದುರಂತವಾಗಿದೆ ಎಂದು ಪಿಎಂಎಲ್‌-ಎನ್ ಮುಖಂಡ ಚೌಧರಿ ನಿಸಾರ್ ಅಲಿ ಖಾನ್ ಆಕ್ರೋಶ ವ್ಯಕ್ತಪಡಿಸಿರುವುದಾಗಿ ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಜನವರಿ 27ರಂದು ಲಾಹೋರಿನಲ್ಲಿ ರೇಮಂಡ್ ಡೇವಿಸ್ (36) ಮೇಲೆ ಮೋಟರ್ ಸೈಕಲ್‌ನಲ್ಲಿ ಆಗಮಿಸಿದ್ದ ಇಬ್ಬರು ದರೋಡೆ ಮಾಡಲು ಯತ್ನಿಸಿದಾಗ ಗುಂಡು ಹಾರಿಸಿದ್ದ. ಅದರ ಪರಿಣಾಮ ಇಬ್ಬರು ಪಾಕ್ ನಾಗರಿಕರು ಸಾವನ್ನಪ್ಪಿದ್ದರು. ಸ್ವಯಂ ರಕ್ಷಣೆ ನಿಟ್ಟಿನಲ್ಲಿ ತಾನು ಗುಂಡು ಹಾರಿಸಿರುವುದಾಗಿ ಡೇವಿಸ್ ಸಮಜಾಯಿಷಿ ನೀಡಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಪೊಲೀಸರು ಡೇವಿಸ್‌ನನ್ನು ಬಂಧಿಸಿದ್ದರು. ಇದರಿಂದಾಗಿ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಲಾಹೋರ್ ಕೋರ್ಟ್ ಮಾರ್ಚ್ 16ರಂದು ಡೇವಿಸ್‌ನನ್ನು ಖುಲಾಸೆಗೊಳಿಸಿತ್ತು.

ಮೃತಕುಟುಂಬಿಕರ ಸದಸ್ಯರಿಗೆ ಪರಿಹಾರ ನೀಡಿದ ನಂತರ ಡೇವಿಸ್‌ನನ್ನು ಕೋರ್ಟ್ ಖುಲಾಸೆಗೊಳಿಸಿ ಬಿಡುಗಡೆ ಮಾಡಿರುವುದಾಗಿ ಆದೇಶ ನೀಡಿತ್ತು. ಈ ವಿಷಯ ಪಾಕಿಸ್ತಾನದಲ್ಲಿ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಇವನ್ನೂ ಓದಿ