ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಓಟಿಗಾಗಿ ನೋಟು-ವಿಕಿಲೀಕ್ಸ್ ಬಗ್ಗೆ ನೋ ಕಮೆಂಟ್: ಅಮೆರಿಕ (US | WikiLeaks | cash for vote | Indo-US nuclear deal | Obama)
ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮನಮೋಹನ್ ಸಿಂಗ್ ಸರಕಾರ ಉಳಿಸಿಕೊಳ್ಳಲು 2008ರಲ್ಲಿ ಸಂಸದರಿಗೆ ಕ್ಯಾಶ್ ಆಫರ್ ನೀಡಿತ್ತು ಎಂಬ ವಿಕಿಲೀಕ್ಸ್ ಸ್ಫೋಟಕ ಮಾಹಿತಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆರಿಕ ನಿರಾಕರಿಸಿದೆ.

ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದ ವಿರೋಧಿಸಿ ಯುಪಿಎ-1 ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸ್ ಪಡೆದ ಪರಿಣಾಮ ಅದು ಅಲ್ಪಮತಕ್ಕೆ ಇಳಿದಿತ್ತು. ಆ ಬಳಿಕ 2008ರ ಜುಲೈ 22ರಂದು ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸಂಸದರು ಕೋಟಿ, ಕೋಟಿ ಹಣದ ಕಂತೆ ಪ್ರದರ್ಶಿಸಿ, ತಮಗೆ ಲಂಚದ ಆಫರ್ ಒಡ್ಡಲಾಗಿತ್ತು ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಸಂದರ್ಭದಲ್ಲಿ ಯುಪಿಎ ಸರಕಾರ ಅಲ್ಪ ಅಂತರದಿಂದ ಅವಿಶ್ವಾಸ ನಿರ್ಣಯದಿಂದ ಬಚಾವ್ ಆಗಿತ್ತು.

ಇದೀಗ ಗುರುವಾರ ದಿ ಹಿಂದೂ ಪತ್ರಿಕೆಯ ಮೂಲಕ ವಿಕಿಲೀಕ್ಸ್ ಯುಪಿಎ-1 ಸರಕಾರ ಸಂಸದರನ್ನು ಹಣ ಕೊಟ್ಟು ಖರೀದಿಸಿರುವ ಅಂಶವನ್ನು ಬಯಲುಗೊಳಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಏತನ್ಮಧ್ಯೆ, ಭಾರತದಲ್ಲಿ ವಿಕಿಲೀಕ್ಸ್ ಹುಟ್ಟು ಹಾಕಿರುವ ವಿವಾದದ ಕುರಿತಂತೆ, ನಾನು ವಿಕಿಲೀಕ್ಸ್ ಕೇಬಲ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆ ಬಗ್ಗೆ ಏನೂ ಮಾತನಾಡಲ್ಲ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮಾರ್ಕ್ ಟೋನೆರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇವನ್ನೂ ಓದಿ