ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವಸಂಸ್ಥೆ ಒತ್ತಡಕ್ಕೆ ಮಣಿದ ಗಡಾಫಿ; ಕೊನೆಗೂ ಕದನ ವಿರಾಮ (Libya | declares ceasefire | UN | Tripoli | Gaddafi)
ಲಿಬಿಯಾ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ಕೊನೆಗೂ ವಿಶ್ವಸಂಸ್ಥೆ ಒತ್ತಡಕ್ಕೆ ಮಣಿದಿದ್ದು, ಪ್ರತಿಭಟನಾಕಾರರ ವಿರುದ್ಧದ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.

ತನ್ನ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಗಡಾಫಿ ಸೇನಾಪಡೆಯನ್ನು ಬಳಸಿಕೊಂಡು ರಕ್ತಪಾತ ನಡೆಸಿದ್ದರು. ಪ್ರತಿಭಟನಾಕಾರರ ವಿರುದ್ಧದ ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಮೆರಿಕ, ವಿಶ್ವಸಂಸ್ಥೆ ತಾಕೀತು ಮಾಡಿದ್ದರೂ ಕೂಡ ಗಡಾಫಿ ಬೆಲೆ ಕೊಟ್ಟಿರಲಿಲ್ಲವಾಗಿತ್ತು. ಆ ಹಿನ್ನೆಲೆಯಲ್ಲಿ ಲಿಬಿಯಾ ವಿರುದ್ಧವೇ ಸೇನಾ ಕಾರ್ಯಾಚರಣೆ ನಡೆಸಲು ವಿಶ್ವಸಂಸ್ಥೆ ಗುರುವಾರ ಮಹತ್ವದ ನಿರ್ಣಯ ಕೈಗೊಂಡಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಬ್ರಿಟನ್, ಅಮೆರಿಕ ಒಪ್ಪಿಗೆ ನೀಡಿದ್ದವು. ಆದರೆ ಭಾರತ ದಾಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ವಿಶ್ವಸಂಸ್ಥೆ ದಾಳಿ ನಿರ್ಣಯ ನಿರ್ಣಯ ಕೈಗೊಂಡ ಬೆನ್ನಲ್ಲೇ, ಲಿಬಿಯಾದಲ್ಲಿ ಕದನ ವಿರಾಮ ಘೋಷಿಸಿರುವುದಾಗಿ ವಿದೇಶಾಂಗ ಸಚಿವ ಮೌಸ್ಸಾ ಕೌಸ್ಸಾ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಇದೀಗ ಲಿಬಿಯಾದಲ್ಲಿ ಕದನ ವಿರಾಮ ಘೋಷಿಸಿದ್ದು, ಬಂಡುಕೋರರ ಜತೆ ಮಾತುಕತೆ ನಡೆಸುವುದಾಗಿ ಹೇಳಿದೆ. ಅಂತಾರಾಷ್ಟ್ರೀಯ ಮಿಲಿಟರಿ ಕಾರ್ಯಾಚರಣೆಯಿಂದ ದೇಶದ ಜನರೇ ಬಲಿಯಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕೌಸ್ಸಾ, ಲಿಬಿಯಾ ಸರಕಾರ ಎಲ್ಲಾ ಪಕ್ಷಗಳ ಜತೆಯೂ ಮುಕ್ತವಾಗಿ ಮಾತುಕತೆ ನಡೆಸಲು ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ