ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸುನಾಮಿ ರೌದ್ರಾವತಾರ; ಪವಾಡಸದೃಶ ಬದುಕುಳಿದ ಅಜ್ಜಿ! (tsunami | Tokyo | 83-year-old escape | Tsuna Kimura | Fukushima | radiation)
ಜಪಾನ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ, ಸುನಾಮಿ ರೌದ್ರಾವತಾರಕ್ಕೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ನಾಪತ್ತೆಯಾಗಿದ್ದಾರೆ. ಅಲ್ಲದೇ ಜಪಾನ್‌ನ ಈಶಾನ್ಯ ಬಂದರು ನಗರವಾದ ಹಾಚಿನೋಹೆ ಸುನಾಮಿಗೆ ತತ್ತರಿಸಿಹೋಗಿದೆ. ಆದರೆ 83ರ ಹರೆಯದ ಅಜ್ಜಿಯೊಬ್ಬಳು ಪವಾಡ ಸದೃಶವಾಗಿ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಪಾನ್‌ನ ಇಶಿನೋಮಾಕಿ ನಗರದ ನಿವಾಸಿಯಾಗಿರುವ 83ರ ಹರೆಯದ ಸುನಾ ಕಿಮುರಾ ಸೈಕಲ್‌ನಲ್ಲಿ ಓಡಿ ಹೋಗುವ ಮೂಲಕ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರಂತೆ!

ಸುನಾಮಿ ಬಡಿದಪ್ಪಳಿಸಲಿದೆ ಎಂಬ ಎಚ್ಚರಿಕೆಯ ಸಂದೇಶ ತಿಳಿಯುತ್ತಿದ್ದಂತೆಯೇ ಅಜ್ಜಿ ಮೊದಲು ಮಾಡಿದ ಕೆಲಸವೆಂದರೆ ಸೈಕಲ್‌ನಲ್ಲಿ ಹೊರಟಿದ್ದು. ಈ ಸುನಾಮಿ ಎಲ್ಲವನ್ನೂ ನಾಶಮಾಡಿದೆ. ಆದರೆ ನಾನು ಮಾತ್ರ ಗೊತ್ತು ಗುರಿ ಇಲ್ಲದೆ ಸೈಕಲ್‌ನಲ್ಲಿ ತನ್ನ ಮನೆ-ಮಠ ಬಿಟ್ಟು ಹೊರಟು ಬರುವ ಮೂಲಕ ಬದುಕುಳಿದಿದ್ದೇನೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಭೂಕಂಪವಾದ ಸಂದರ್ಭದಲ್ಲಿ ಮನೆಯಲ್ಲಿ ಒಂಟ್ಟಿಯಾಗಿ ವಾಸ್ತವ್ಯ ಇದ್ದ ಅಜ್ಜಿ, ಕೂಡಲೇ ಸೈಕಲ್‌ನಲ್ಲಿ ಹೊರಟಿದ್ದರು. ಬಳಿಕ ಬಂದಪ್ಪಳಿಸದ ಸುನಾಮಿ ಅಲೆಗಳಿಗೆ ಮನೆ ಸಂಪೂರ್ಣ ನಾಶವಾಗಿ ಹೋಗಿರುವುದಾಗಿ ಅಜ್ಜಿ ಹೇಳಿದ್ದಾರೆ.
ಇವನ್ನೂ ಓದಿ