ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಂಗ್ಲಾ ಸಂಸತ್‌ನಲ್ಲಿ ಅಶ್ಲೀಲ ಪದ ಬಳಕೆ; ಸ್ಪೀಕರ್ ಕಿಡಿ (Bangladesh | Speaker | Vulgar language | Abdul Hamid | Parliament)
ಬಾಂಗ್ಲಾದೇಶ ಸಂಸತ್‌ನಲ್ಲಿ ಹಿರಿಯ ಸಂಸದರೇ ಅಶ್ಲೀಲ ಪದ ಬಳಕೆ ಮಾಡಿ ಒಬ್ಬರ ವಿರುದ್ಧ ಇನ್ನೊಬ್ಬರು ವಾಗ್ದಾಳಿ ನಡೆಸಿದ ಘಟನೆಯಿಂದ ನೊಂದ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಸಂಸತ್‌ನೊಳಗೆ ಹಿರಿಯ ಸಂಸದರೇ ಸಹೋದ್ಯೋಗಿಗಳ ವಿರುದ್ಧವೇ ಅಶ್ಲೀಲ ಪದ ಬಳಕೆ ಮಾಡಿ ವಾಗ್ದಾಳಿ ನಡೆಸಿದ ಬಗ್ಗೆ ಸ್ಪೀಕರ್ ಅಬ್ದುಲ್ ಹಮೀದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ನಿಜಕ್ಕೂ ದುರದೃಷ್ಟಕರ ಘಟನೆ, ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರೇ ಬಾಯಿಗೆ ಬಂದಂತೆ ಅವಾಚ್ಯ ಶಬ್ದ ಉಪಯೋಗಿಸಿ ಮಾತನಾಡುವುದು ಸರಿಯಲ್ಲ ಎಂದು ಸ್ಪೀಕರ್ ತಿಳಿಸಿರುವುದಾಗಿ ಮಾಧ್ಯಮದ ವರದಿಯೊಂದು ಹೇಳಿದೆ.

ಪ್ರತಿ ಬಾರಿಯೂ ಅಸಾಂವಿಧಾನಿಕ ಪದ ಬಳಸುತ್ತಿರುವುದು ಪಾರ್ಲಿಮೆಂಟ್ ಘನತೆಗೆ ಧಕ್ಕೆ ತರುವಂತಹದ್ದು, ನಾನು ಸದನದ ಸ್ಪೀಕರ್ ಆಗಿ ಅದಕ್ಕೆ ಕಡಿವಾಣ ಹಾಕುವುದು ನನ್ನ ಕರ್ತವ್ಯ ಎಂದು ಹಮೀದ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬಾಂಗ್ಲಾದೇಶ ನ್ಯಾಷನಲಿಷ್ಟ್ ಪಕ್ಷದ ಸದಸ್ಯ ಸೈಯದ್ ಅಸಿಫಾ ಪಾಪಿಯಾ, ಸ್ಪೀಕರ್ ಕೂಡ ಸರಿಯಾಗಿ ಮಾತನಾಡಬೇಕು ಎಂದು ಆಗ್ರಹಿಸಿರುವುದಾಗಿ ವರದಿ ತಿಳಿಸಿದೆ.
ಇವನ್ನೂ ಓದಿ