ಲಿಬಿಯಾ ಸರ್ವಾಧಿಕಾರಿ ಮೊಮ್ಮರ್ ಗಡಾಫಿಯ ಪುತ್ರನೊಬ್ಬ ಟ್ರೈಪೋಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ವೆಬ್ಸೈಟ್ ಹಾಗೂ ಅರಬ್ ಮಾಧ್ಯಮದ ವರದಿಗಳು ತಿಳಿಸಿವೆ.
ಲಿಬಿಯಾ ವಾಯುದಳದ ಪೈಲಟ್ ಒಬ್ಬರು ಉದ್ದೇಶಪೂರ್ವಕವಾಗಿಯೇ ಟ್ರೈಪೋಲಿಯಲ್ಲಿರುವ 'ಬಾಬ್ ಅಲ್ ಅಜಿಝಿಯಾ' ಕಟ್ಟಡದ ಆವರಣಕ್ಕೆ ಜೆಟ್ ವಿಮಾನವನ್ನು ಡಿಕ್ಕಿ ಹೊಡೆದ ಪರಿಣಾಮ ಗಡಾಫಿ ಪುತ್ರ ಖಾಮಿಸ್ ಗಡಾಫಿ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವಿರೋಧಿ ಪಡೆಯ ವೆಬ್ಸೈಟ್ಗಳು ವರದಿ ಮಾಡಿವೆ.
ಖಾಮಿಸ್ ಗಡಾಫಿ ಸಾವಿನ ಬಗ್ಗೆ ಲಿಬಿಯಾ ಸರಕಾರವಾಗಲಿ, ಗಡಾಫಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಘಟನೆಯಲ್ಲಿ ಖಾಮಿಸ್ ಸಾವನ್ನಪ್ಪಿರುವುದಾಗಿ ಅರೆಬಿಯನ್ ಬ್ಯೂಸಿನೆಸ್ ನ್ಯೂಸ್ ವೆಬ್ಸೈಟ್ ವರದಿ ತಿಳಿಸಿದೆ.