ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾದ ಮೇಲೆ ದಾಳಿ; ಮೊಮ್ಮರ್ ಗಡಾಫಿ ನಾಪತ್ತೆ? (Moammar Gaddafi | whereabouts | Tripoli | Libya | strike)
ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ದಾಳಿಯಲ್ಲಿ ಲಿಬಿಯಾ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ಮನೆಯ ಆವರಣ ಸಂಪೂರ್ಣ ಧ್ವಂಸಗೊಂಡಿದೆ. ಏತನ್ಮಧ್ಯೆ ಸರ್ವಾಧಿಕಾರಿ ಗಡಾಫಿಯನ್ನು ಅಮೆರಿಕ ಮಿತ್ರಪಡೆ ಕೊಲ್ಲಲು ಯತ್ನಿಸುತ್ತಿದ್ದಾರೆಂಬ ಊಹಾಪೋಹ, ಚರ್ಚೆ ನಡೆಯುತ್ತಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ನಾವು ಗಡಾಫಿ ಅಥವಾ ಅವರ ಮನೆಯನ್ನು ಗುರಿಯಾಗಿಟ್ಟು ದಾಳಿ ನಡೆಸುತ್ತಿಲ್ಲ. ಅಲ್ಲದೆ ಗಡಾಫಿ ವಿರುದ್ಧದ ಹೋರಾಟದ ನಂತರ ನಾವು ಮುಂದುವರಿಯಲ್ಲ ಎಂದು ಅಮೆರಿಕದ ಅಡಂ ಬಿಲ್ ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಗಡಾಫಿ ಅರಮನೆಯ ಸುತ್ತಮುತ್ತ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗಲೂ, ನಾವು ಗಡಾಫಿ ಮನೆಯನ್ನು ಗುರಿಯಾಗಿಟ್ಟು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಏತನ್ಮಧ್ಯೆ ದೀರ್ಘಾಕಾಲದವರೆಗೂ ಯುದ್ಧ ಮುಂದುವರಿಸುವುದಾಗಿ ಘೋಷಿಸಿರುವ ಗಡಾಫಿ ಎಲ್ಲಿದ್ದಾರೆ ಎಂಬುದು ಪ್ರಶ್ನೆಯಾಗಿದ್ದರೆ, ಅವರ ಮುಂದಿನ ಯೋಜನೆಗಳೇನು ಎಂಬುದು ತಿಳಿಯುತ್ತಿಲ್ಲ ಎಂದು ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ. ಲಿಬಿಯಾ ಜನರ ಮೇಲೆ ನಡೆಸುತ್ತಿರುವ ದಾಳಿಯನ್ನು ಕೈಬಿಡುವಂತೆ ಸಾಕಷ್ಟು ಬಾರಿ ಒತ್ತಡ ಹೇರಿದ್ದರೂ ಕೂಡ ಗಡಾಫಿ ಕದನ ವಿರಾಮ ಘೋಷಿಸಿದ ಮೇಲೆಯೂ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿರುವ ವಿಶ್ವಸಂಸ್ಥೆ, ಅಮೆರಿಕ ನೇತೃತ್ವದ ಮಿತ್ರಪಡೆ ದಾಳಿಗೆ ಮುಂದಾಗಿವೆ.

ಬ್ರಿಟನ್‌ನ ಜೆಟ್ ವಿಮಾನಗಳು ಟ್ರೈಪೋಲಿ ಮೇಲೆ ಭಾನುವಾರ ರಾತ್ರಿ ಕೂಡ ದಾಳಿ ನಡೆಸಿಲ್ಲ. ಅಲ್ಲಿನ ಅಮಾಯಕ ನಾಗರಿಕರು ದಾಳಿಗೆ ಬಲಿಯಾಗಬಹುದು ಎಂಬ ಕಾಳಜಿಯಿಂದ ದಾಳಿ ಸ್ಥಗಿತಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಅಮೆರಿಕದ ನೇತೃತ್ವದ ಮಿತ್ರಪಡೆಗಳು ನಡೆಸಿದ ದಾಳಿಯಲ್ಲಿ ಸುಮಾರು 70 ವಾಹನಗಳು ಸುಟ್ಟು ಬೂದಿಯಾಗಿರುವುದಾಗಿ ವರದಿ ವಿವರಿಸಿದೆ. ಅಮೆರಿಕದ ನೇತೃತ್ವದಲ್ಲಿ ಆರಂಭವಾಗಿರುವ ಆಪರೇಷನ್ ಒಡೆಸ್ಸಿ ಡಾನ್ ನೇತೃತ್ವವನ್ನು ಫ್ರಾನ್ಸ್, ಬ್ರಿಟನ್ ಅಥವಾ ನ್ಯಾಟೋಗೆ ಬಿಟ್ಟುಕೊಡಲು ಅಮೆರಿಕ ಚಿಂತನೆ ನಡೆಸಿರುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.
ಇವನ್ನೂ ಓದಿ