ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡೇವಿಸ್ ಬಂಧಮುಕ್ತ-ಪಾಕ್‌ಗೆ ಅವಮಾನ: ಇಮ್ರಾನ್ ಖಾನ್ (Raymond Davis | CIA | Pakistan | Imran Khan | PPP | Lahore)
ಲಾಹೋರ್‌ನಲ್ಲಿ ಇಬ್ಬರನ್ನು ಹತ್ಯೆಗೈದಿರುವ ಅಮೆರಿಕದ ಸಿಐಎ ಏಜೆಂಟ್ ರೇಮಂಡ್ ಡೇವಿಸ್‌ನನ್ನು ಬಿಡುಗಡೆ ಮಾಡಿರುವುದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಎಂದು ಮಾಜಿ ಕ್ರಿಕೆಟಿಗ, ರಾಜಕೀಯ ಮುಖಂಡ ಇಮ್ರಾನ್ ಖಾನ್ ಕಟುವಾಗಿ ಟೀಕಿಸಿದ್ದಾರೆ.

ಡೇವಿಸ್‌ ಮೇಲೆ ಗುರುತರ ಆರೋಪ ಇದ್ದರೂ ಕೂಡ ಹೇಗೆ ಬಂಧಮುಕ್ತಗೊಳಿಸಲಾಯಿತು ಎಂದು ಪ್ರಶ್ನಿಸಿರುವ ಖಾನ್, ಈ ನಿರ್ಧಾರ ನಿಜಕ್ಕೂ ಪಾಕಿಸ್ತಾನ ಆಡಳಿತಾರೂಢರಿಗೆ ದೊಡ್ಡ ಅವಮಾನ ಎಂದು ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ಮೋಟಾರ್ ಬೈಕ್‌ನಲ್ಲಿ ಆಗಮಿಸಿದ್ದ ಇಬ್ಬರು ದರೋಡೆ ಮಾಡಲು ಯತ್ನಿಸಿದ್ದ ಸಂದರ್ಭದಲ್ಲಿ ಡೇವಿಸ್ ಗುಂಡು ಹಾರಿಸಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದರು. ಈ ಘಟನೆ ಜನವರಿ 27ರಂದು ನಡೆದಿತ್ತು. ತಾನು ಸ್ವಯಂ ರಕ್ಷಣೆಗಾಗಿ ಈ ರೀತಿ ಮಾಡಿರುವುದಾಗಿ ಡೇವಿಸ್ ಸ್ಪಷ್ಟನೆ ನೀಡಿದ್ದ. ತದನಂತರ ಪಾಕ್ ಪೊಲೀಸರು ಡೇವಿಸ್‌ನನ್ನು ಬಂಧಿಸಿದ್ದರು. ಇದು ಅಮೆರಿಕ ಮತ್ತು ಪಾಕ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಏತನ್ಮಧ್ಯೆ ಮೃತ ಕುಟುಂಬಗಳಿಗೆ ಡೇವಿಸ್ ಪರಿಹಾರ ನೀಡಿದ ನಂತರ ಲಾಹೋರ್ ಕೋರ್ಟ್ ಆತನನ್ನು ಖುಲಾಸೆಗೊಳಿಸಿತ್ತು. ಡೇವಿಸ್ ಬಿಡುಗಡೆ ಹಿಂದೆ ಅಮೆರಿಕದ ಸಿಐಎ ಮತ್ತು ಪಾಕಿಸ್ತಾನದ ಐಎಸ್ಐ ನಡುವೆ ರಹಸ್ಯ ಒಪ್ಪಂದ ನಡೆದಿರುವುದಾಗಿ ಮಾಧ್ಯಮದ ವರದಿಗಳು ಆರೋಪಿಸಿದ್ದವು.
ಇವನ್ನೂ ಓದಿ