ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಬಿಎಸ್ಎಫ್‌ನಿಂದ 136 ಜನರ ಹತ್ಯೆ: ಬಾಂಗ್ಲಾ (India | BSF | Bangladesh | Sahara Khatun | killed 136 | Parliament)
ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸುಮಾರು 136 ಬಾಂಗ್ಲಾದೇಶಿ ಪ್ರಜೆಗಳನ್ನು ಹತ್ಯೆಗೈದಿದ್ದು, 170 ಜನರನ್ನು ಗಾಯಗೊಳಿಸಿರುವುದಾಗಿ ಬಾಂಗ್ಲಾದೇಶ ಗೃಹ ಸಚಿವೆ ಸಾಹಾರಾ ಖಾತುನ್ ತಿಳಿಸಿದ್ದಾರೆ.

ಆದರೆ ಉಭಯ ದೇಶಗಳ ನಡುವಿನ ಮಾತುಕತೆ ಮೂಲಕ ಇಂತಹ ಘಟನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಖಾತುನ್ ಸಂಸತ್‌ನಲ್ಲಿ ಮಾತನಾಡುತ್ತ ತಿಳಿಸಿರುವುದಾಗಿ ನ್ಯೂ ಏಜ್ ಪತ್ರಿಕೆ ವರದಿ ಮಾಡಿದೆ.

ಅಷ್ಟೇ ಅಲ್ಲ ಗಡಿಭಾಗದ ಪ್ರದೇಶದಲ್ಲಿ ರಬ್ಬರ್ ಬುಲ್ಲೆಟ್ಸ್ ಸೇರಿದಂತೆ ಮಾರಕವಲ್ಲದ ಆಯುಧವನ್ನು ಬಳಸುವುದಾಗಿ ಭಾರತ ಭರವಸೆ ನೀಡಿರುವುದಾಗಿ ವಿವರಿಸಿದರು. ಸಂಸತ್ ಸದಸ್ಯರಾದ ಜಾಟಿಯೋ ಸ್ಯಾಂಗ್ಸಾದ್ ಅವರು ಕೇಳಿದ ಪ್ರಶ್ನೆಗೆ ಸಾಹಾರಾ ಈ ಉತ್ತರ ನೀಡಿದ್ದಾರೆ.

ಬಾಂಗ್ಲಾದೇಶ ಗಡಿ ಭದ್ರತಾ ಪಡೆ (ಬಿಜಿಬಿ) ಹಾಗೂ ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್ಎಫ್) ಜನರಲ್‌ಗಳ ಜತೆ ಕಳೆದ ತಿಂಗಳು ನಡೆದ ಮಾತುಕತೆ ವೇಳೆಯಲ್ಲಿ ಭಾರತ ಈ ಭರವಸೆ ನೀಡಿರುವುದಾಗಿ ಅವರು ಹೇಳಿದರು. 2009ರ ಜನವರಿ 1ರಿಂದ 2011ರ ಮಾರ್ಚ್ 14ರವರೆಗೆ ಬಿಎಸ್ಎಫ್ ಪಡೆ ನಡೆಸಿದ ದಾಳಿಗೆ 136 ಬಾಂಗ್ಲಾದೇಶಿ ಪ್ರಜೆಗಳು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಇವನ್ನೂ ಓದಿ