ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷರ್ರಫ್ ಸೆರೆಗೆ ಇಂಟರ್‌ಪೋಲ್ ನೆರವು ಬೇಕು: ಪಾಕ್ (Pakistan | Benazir Bhutto | Pervez Musharraf | Interpol,)
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಬಂಧನಕ್ಕೆ ಇಂಟರ್‌ಪೋಲ್ ನೆರವು ಕೇಳಲು ಪಾಕಿಸ್ತಾನ ಮುಂದಾಗಿದೆ.

ಪ್ರಕರಣದ ಕುರಿತಂತೆ ಮುಷರಫ್ ವಿರುದ್ಧ ಬಂಧನದ ಆದೇಶ ಹೊರಡಿಸಿದ್ದ ಪಾಕಿಸ್ತಾನ ಕೋರ್ಟ್,ಮುಷ್ ಅವರನ್ನು ಏಪ್ರಿಲ್ 2ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕಳೆದ ವಾರ ಪ್ರಾಸಿಕ್ಯೂಟರ್ಸ್‌ಗೆ ಅಂತಿಮ ಸೂಚನೆ ನೀಡಿತ್ತು. 2007ರ ಡಿಸೆಂಬರ್‌ನಲ್ಲಿ ಭುಟ್ಟೋ ಅವರನ್ನು ರಾವಲ್ಪಿಂಡಿಯಲ್ಲಿ ಆತ್ಮಹತ್ಯಾ ದಾಳಿ ನಡೆಸಿ ಹತ್ಯೆಗೈದ ಸಂದರ್ಭದಲ್ಲಿ ಮುಷ್ ಪಾಕ್ ಅಧ್ಯಕ್ಷರಾಗಿದ್ದರು.

ಅಧ್ಯಕ್ಷಗಾದಿಯಿಂದ ಕೆಳಗಿಳಿದ ನಂತರ ಸ್ವಯಂ ಆಗಿ ಗಡಿಪಾರುಗೊಂಡಿದ್ದ ಮುಷರ್ರಫ್ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಬೆನಜೀರ್ ಭುಟ್ಟೋ ಪಾಕಿಸ್ತಾನಕ್ಕೆ ವಾಪಸಾದ ನಂತರ ಸೂಕ್ತ ಭದ್ರತೆ ನೀಡಲಿಲ್ಲ ಎಂಬ ಆರೋಪ ಮುಷರ್ರಫ್ ಮೇಲಿದೆ.

ಮುಷ್ ವಿರುದ್ಧ ಕೋರ್ಟ್ ಹೊರಡಿಸಿದ್ದ ಬಂಧನ ಆದೇಶವನ್ನು ಬ್ರಿಟನ್ ಸರಕಾರಕ್ಕೆ ಕಳುಹಿಸಿರುವುದಾಗಿ ಪ್ರಾಸಿಕ್ಯೂಟರ್ ಚೌಧರಿ ಜುಲ್ಫಿಕರ್ ಅಲಿ ತಿಳಿಸಿದ್ದಾರೆ. ಆದರೆ ನಾವು ಬ್ರಿಟನ್ ಗೃಹ ಇಲಾಖೆಯಿಂದ ಈವರೆಗೂ ಯಾವುದೇ ವರದಿಯನ್ನು ಪಡೆದಿಲ್ಲ. ಹಾಗಾಗಿ ಇಂಟರ್‌ಪೋಲ್ ಸಹಾಯಕ್ಕಾಗಿ ಪತ್ರ ಬರೆದಿರುವುದಾಗಿ ಅಲಿ ವಿವರಿಸಿದ್ದಾರೆ. ಬೆನಜೀರ್ ಭುಟ್ಟೋ ಅವರನ್ನು ಚುನಾವಣೆಗೂ ಮುನ್ನ ಹತ್ಯೆಗೈಯುವ ಸಂಚಿನ ಹಿಂದೆ ಮುಷರ್ರಫ್ ಅವರ ಕೈವಾಡ ಇದೆ ಎಂದು ಹೇಳಿರುವ ಅಲಿ ತಿಳಿಸಿದ್ದಾರೆ.
ಇವನ್ನೂ ಓದಿ