ಭೂಕಂಪ, ಸುನಾಮಿಯಿಂದ ತತ್ತರಿಸಿ ಹೋಗಿದ್ದ ಜಪಾನ್‌ನ ಈಶಾನ್ಯ ಭಾಗದಲ್ಲಿ ಸೋಮವಾರ ಮತ್ತೆ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭ ಶಾಸ್ತ್ರ ಇಲಾಖೆ ತಿಳಿಸಿದೆ.
ಇಂದು 6.5ರಷ್ಟು ತೀವ್ರತೆಯ ಕಂಪನ ಉಂಟಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಭೂಕಂಪದ ಹಿನ್ನೆಲೆಯಲ್ಲಿ ಜಪಾನ್ ಹವಾಮಾನ ಇಲಾಖೆ ಸುನಾಮಿ ಬಡಿದಪ್ಪಳಿಸುವ ಎಚ್ಚರಿಕೆಯನ್ನು ನೀಡಿದೆ.
ಮಾರ್ಚ್ 11ರಂದು ಜಪಾನ್‌ನ ಟೋಕಿಯೋ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ, ಸುನಾಮಿಯಿಂದಾಗಿ ಹಲವು ಹಳ್ಳಿ, ಕಟ್ಟಡಗಳು ಕೊಚ್ಚಿಹೋಗಿದ್ದವು. ಬಿಲಿಯನ್‌ಗಟ್ಟಲೇ ನಷ್ಟ ಉಂಟಾಗಿದ್ದರೆ, ಮತ್ತೊಂದೆಡ ಫುಕುಶಿಮಾದಲ್ಲಿನ ಅಣು ರಿಯಾಕ್ಟರ್ ಸ್ಫೋಟದಿಂದಾಗಿ ವಿಕಿರಣ ಸೋರುವಿಕೆ 1 ಕೋಟಿ ಪಟ್ಟು ಹೆಚ್ಚಾಗಿರುವುದು ಜನರಲ್ಲಿ ಹೆಚ್ಚಿನ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಆದರೆ ಮತ್ತೆ ಭೂಕಂಪ ಸಂಭವಿಸಿದ ಆತಂಕದಲ್ಲಿ ಈ ಮೊದಲು ನೀಡಿರುವ ಸುನಾಮಿ ಎಚ್ಚರಿಕೆಯನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಂದು ಸಂಭವಿಸಿದ ಭೂಕಂಪದಲ್ಲಿನ ಸಾವು-ನೋವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.