ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭ್ರಷ್ಟಾಚಾರದ ಕೇಸ್; ಅಫ್ಘಾನ್ ಮಾಜಿ ಸಚಿವ ಬಂಧನ (Afghanistan | ex-minister arrested | graft case | Hamid Karzai | Inayatullah Qasimi)
ಭ್ರಷ್ಟಾಚಾರದ ಕೇಸ್; ಅಫ್ಘಾನ್ ಮಾಜಿ ಸಚಿವ ಬಂಧನ
ಕಾಬೂಲ್, ಮಂಗಳವಾರ, 29 ಮಾರ್ಚ್ 2011( 13:35 IST )
ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಅಫ್ಘಾನಿಸ್ತಾನದ ಮಾಜಿ ಸಾರಿಗೆ ಸಚಿವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
2004ರಲ್ಲಿ ಸಚಿವರಾಗಿ ನೇಮಕಗೊಂಡಿದ್ದ ಇನ್ಯಾತುಲ್ಲಾ ಖ್ವಾಸಿಮಿ ತಮ್ಮ ಎರಡು ವರ್ಷಗಳ ಕಾಲಾವಧಿಯಲ್ಲಿಯೇ ಸುಮಾರು 9 ಮಿಲಿಯನ್‌ನಷ್ಟು ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ಅಲ್ಲದೆ, ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹಾಗಾಗಿ ಅವರು ವಿಚಾರಣೆ ಎದುರಿಸುತ್ತಿರುವುದಾಗಿ ಅಟಾರ್ನಿ ಜನರಲ್ ಕಚೇರಿಯ ವಕ್ತಾರರು ವಿವರಿಸಿದ್ದಾರೆ.
ಅಧ್ಯಕ್ಷ ಹಮೀದ್ ಕರ್ಜಾಯ್ ನೇತೃತ್ವದ ಆಡಳಿತದಲ್ಲಿ ಭ್ರಷ್ಟಾಚಾರದ ಆರೋಪದಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಮೊದಲ ಮಾಜಿ ಸಚಿವರಾಗಿದ್ದಾರೆ.
ಸಚಿವರಾಗಿದ್ದ ವೇಳೆ ಇನ್ಯಾತುಲ್ಲಾ ಅಫ್ಘಾನ್ ಸ್ವಾಮಿತ್ವದ ಅರಿಯಾನಾದ ಜೊತೆ ಎರಡು ನೂತನ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ವಕ್ತಾರ ಅಮಾನುಲ್ಲಾ ಇಮಾಮ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ವಿವರಣೆ ನೀಡಿಲ್ಲ.
ಖ್ವಾಸಿಮಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಸಾರ್ವಜನಿಕ ಹಣವನ್ನು ದುರಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಿರುವ ಇಮಾಮ್, ಇದರಿಂದಾಗಿ ಸುಮಾರು 9 ಮಿಲಿಯನ್ ನಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.