ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಿಲಾನಿ ಭೇಟಿಯಿಂದ ವಿವಾದ ಇತ್ಯರ್ಥವಾಗಲ್ಲ: ಮುಷರ್ರಫ್ (Pakistan | Pervez Musharraf | Cricket diplomacy | Manmohan Singh)
ಭಾರತದ ಮೊಹಾಲಿಯಲ್ಲಿ ನಡೆಯಲಿರುವ ಭಾರತ-ಪಾಕ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕ್ ಪ್ರಧಾನಿ ಗಿಲಾನಿ ಅವರನ್ನು ಆಹ್ವಾನಿಸಿರುವ ಕ್ರಮವನ್ನು ಸ್ವಾಗತಿಸಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್, ಹಾಗಂತ ಕ್ರಿಕೆಟ್ ರಾಯಬಾರತ್ವದಿಂದಲೇ ವಿವಾದಗಳು ಬಗೆಹರಿಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನನ್ನ ಪ್ರಕಾರ ಇದೊಂದು ಅವಕಾಶ ಎಂದಿರುವ ಮುಷ್, ಇದರಿಂದಾಗಿ ಎರಡು ಲಾಭಗಳಿವೆ ಎಂದು ತಿಳಿಸಿದ್ದಾರೆ.ಉಭಯ ದೇಶಗಳ ನಡುವಿನ ಅಪನಂಬಿಕೆ ಸ್ವಲ್ಪ ತಣ್ಣಗಾಗಲಿದೆ. ಎರಡನೇಯದಾಗಿ ಗಿಲಾನಿ ಭೇಟಿಯಿಂದಾಗಿ ಎರಡು ದೇಶಗಳ ನಾಯಕರ ಜತೆಗಿನ ಚರ್ಚೆಯಿಂದಾಗಿ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ವಿಶ್ಲೇಷಿಸಿದರು.

ಒಟ್ಟಾರೆ ಈ ಬೆಳವಣಿಗೆ ನನ್ನ ಅಭಿಪ್ರಾಯದಂತೆ ಉಭಯ ದೇಶಗಳ ಸಂಬಂಧ ಮತ್ತು ವೈಯಕ್ತಿಕ ಸಂಬಂಧಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ ಎಂದು ಹೇಳಿದರು.

ಇಂದು ಮೊಹಾಲಿಯಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಆಗಮಿಸುವಂತೆ ಮನಮೋಹನ್ ಸಿಂಗ್ ಅವರು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿಗೆ ಆಹ್ವಾನ ನೀಡಿದ್ದರು. ಆ ನಿಟ್ಟಿನಲ್ಲಿ ಕ್ರಿಕೆಟ್ ರಾಜತಾಂತ್ರಿಕತೆಯಿಂದ ವೈಯಕ್ತಿಕ ಸಂಬಂಧಗಳು ಹೆಚ್ಚು ಗಟ್ಟಿಗೊಳ್ಳಲಿದೆ ಎಂದು ಮುಷ್ ಟೈಮ್ಸ್ ನೌ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಇವನ್ನೂ ಓದಿ