ಲಿಬಿಯಾದಲ್ಲಿನ ಕರ್ನಲ್ ಮೊಅಮ್ಮರ್ ಗಡಾಫಿ ನೇತೃತ್ವದ ಪಡೆ ವಿರುದ್ಧ ವೈಮಾನಿಕ ದಾಳಿ ನಡೆಸಲು ಮತ್ತು ಬಂಡುಕೋರರಿಗೆ ನೆರವು ನೀಡುವ ನಿಟ್ಟಿನಲ್ಲಿ ಅಮೆರಿಕದ ಸಿಐಎ ( ದಿ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ತಂಡ ಕಾರ್ಯಾಚರಿಸುತ್ತಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಲಿಬಿಯಾದಲ್ಲಿ ಅಮೆರಿಕ ನೇತೃತ್ವದ ಸೈನಿಕ ಪಡೆ ಪಾಲ್ಗೊಳ್ಳುವುದಿಲ್ಲ ಎಂದು ಅಧ್ಯಕ್ಷ ಬರಾಕ್ ಒಬಾಮಾ ಈಗಾಗಲೇ ಘೋಷಿಸಿದ್ದಾರೆ. ಆದರೆ ಸಿಐಎನ ಸಣ್ಣ ತಂಡವೊಂದು ಲಿಬಿಯಾದಲ್ಲಿ ಹಲವು ವಾರಗಳಿಂದ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಹಾಗಾಗಿ ಗಡಾಫಿ ವಿರುದ್ಧದ ಮಿಲಿಟರಿ ಪಡೆಯನ್ನು ಹಿಮ್ಮೆಟ್ಟಿಸಲು ಇದು ಸಹಾಯಕವಾಗಲಿದೆ ಎಂಬ ವಿಶ್ವಾಸ ನಮ್ಮದು ಎಂದು ಅಧಿಕಾರಿ ಹೇಳಿದ್ದಾರೆ.
ಟ್ರೈಪೋಲಿಯಲ್ಲಿ ಈಗಾಗಲೇ ಹಲವಾರು ಮಂದಿ ಸಿಐಎ ಏಜೆಂಟ್ ಕಾರ್ಯಾಚರಿಸುತ್ತಿದ್ದು, ಅವರ ಸಂಖ್ಯೆ ಎಷ್ಟೆಂಬ ವಿವರ ನೀಡಿಲ್ಲ. ಏತನ್ಮಧ್ಯೆ ಬ್ರಿಟನ್ ಅಧಿಕಾರಿಗಳು, ಬ್ರಿಟನ್ ಸ್ಪೆಶನ್ ಫೋರ್ಸ್ ಹಾಗೂ ಎಂ16 ಇಂಟೆಲಿಜೆನ್ಸ್ ಅಧಿಕಾರಿಗಳು ಲಿಬಿಯಾದಲ್ಲಿ ಹಾಜರಿದ್ದಾರೆ. ಆ ನಿಟ್ಟಿನಲ್ಲಿ ಬ್ರಿಟನ್ ಅಧಿಕಾರಿಗಳು ಬ್ರಿಟನ್ ಜೆಟ್ಸ್‌ಗಳಿಗೆ ದಾಳಿ ನಡೆಸಲು ನಿರ್ದೇಶನ ನೀಡುತ್ತಿದ್ದಾರೆ ಎಂದು ವರದಿಯೊಂದು ವಿವರಿಸಿದೆ.