ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಮಾಚಿ ಸಚಿವರನ್ನು ಮೂರು ದಿನಗಳ ನಂತರ ಬಂಧಮುಕ್ತಗೊಳಿಸಿರುವುದಾಗಿ ಅಫ್ಘಾನ್ ಸರಕಾರ ತಿಳಿಸಿದೆ.
ಸಾರ್ವಜನಿಕ ಹಣ ದುರುಪಯೋಗ ಮತ್ತು ಅಧಿಕಾರಿಗಳ ತೇಜೋವಧೆ ಪ್ರಕರಣದಲ್ಲಿ ಸೆರೆಯಾಗಿದ್ದ ಮಾಜಿ ಸಾರಿಗೆ ಸಚಿವ ಇನ್ಯಾಯತುಲ್ಲಾ ಖ್ವಾಸಿಮಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅವರು ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಅಟಾರ್ನಿ ಜನರಲ್ ಕಚೇರಿ ಮೂಲಗಳು ಹೇಳಿವೆ.
ಸಚಿವರ ಬಿಡುಗಡೆಯನ್ನು ಪ್ರಾಸಿಕ್ಯೂಟರ್ಸ್ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ ಏಜೆನ್ಸಿಗೆ ಖಚಿತಪಡಿಸಿದ್ದಾರೆ. ಆದರೆ ತನ್ನ ಹೆಸರನ್ನು ಬಹಿರಂಗಗೊಳಿಸದಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ತನಗೆ ಈ ವಿಷಯದ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ.
ಇನ್ಯಾಯತುಲ್ಲಾ ಖ್ವಾಸಿಮಿ ಬಿಡುಗಡೆಗೆ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ಇಶಾಕ್ ಅಲಾಕೋ ಆದೇಶ ನೀಡಿದ್ದರು. ಆದರೆ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ.