ದೇಶದ ಪವರ್ ಫುಲ್ ಮಿಲಿಟರಿ ಗುಪ್ತಚರ ಏಜೆನ್ಸಿಯಾದ ಐಎಸ್ಐನ ವರಿಷ್ಠ ಅಹ್ಮದ್ ಶೂಜಾ ಪಾಷಾ ಅವರ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷಗಳ ಕಾಲ ಮುಂದುವರಿಸಿರುವುದಾಗಿ ಪಾಕಿಸ್ತಾನ ತಿಳಿಸಿದ್ದು, ನಂತರ ಅವರು ನಿವೃತ್ತಿಯಾಗಲಿದ್ದಾರೆ ಎಂದು ಹೇಳಿದೆ.
ಐಎಸ್ಐನ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರ್ ಅಹ್ಮದ್ ಶೂಜಾ ಪಾಷಾ ಅವರು ಕಳೆದ ತಿಂಗಳು ಸೇವೆಯಿಂದ ನಿವೃತ್ತರಾಗಿದ್ದರು. ಆದರೆ ಶೂಜಾ ಅವರನ್ನು ಮತ್ತೆ ಒಂದು ವರ್ಷಗಳ ಕಾಲ ಮುಂದುವರಿಯುವಂತೆ ಆದೇಶ ನೀಡಲಾಗಿದೆ ಎಂದು ಪ್ರಧಾನಿ ಯೂಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ಪಾಷಾ ಅವರು ತುಂಬಾ ಬುದ್ಧಿವಂತ ವ್ಯಕ್ತಿ ಎಂದು ಗಿಲಾನಿ ಶ್ಲಾಘಿಸಿದ್ದಾರೆ. ಒಂದು ವರ್ಷಗಳ ಹೆಚ್ಚಿನ ಕಾಲಾವಧಿಯ ವಿಸ್ತರಣೆ ಪಡೆಯುತ್ತಿರುವ ಎರಡನೇ ವ್ಯಕ್ತಿಯಾಗಿದ್ದಾರೆ.
ಕಳೆದ ವರ್ಷ ಮಿಲಿಟರಿ ವರಿಷ್ಠ ಅಶ್ಪಾಕ್ ಕಯಾನಿ ಅವರ ಕಾಲಾವಧಿಯನ್ನು ಮತ್ತೆ ಮೂರು ವರ್ಷಗಳ ಕಾಲಕ್ಕೆ ವಿಸ್ತರಿಸಲಾಗಿತ್ತು. ಇದೀಗ ಪಾಶಾ ಅವರ ಅಧಿಕಾರಾವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ.