ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ ಪೊಲೀಸ್ ರೇಡ್; ಬೀದಿ ಮಾರಾಟಗಾರರು, ಭಿಕ್ಷುಕರ ಸೆರೆ (Dubai | streets vendors | beggars | arreste | pirated CDs)
ರಸ್ತೆ ಬದಿಯ ಮಾರಾಟಗಾರರು, ಭಿಕ್ಷುಕರು ಹಾಗೂ ಕಾರು ಸ್ವಚ್ಚ ಮಾಡುತ್ತಿರುವ ಕೂಲಿಗಳು ಸೇರಿದಂತೆ ಸುಮಾರು 499 ಜನರನ್ನು ಸೆರೆ ಹಿಡಿದಿರುವುದಾಗಿ ದುಬೈ ಪೊಲೀಸರು ತಿಳಿಸಿದ್ದಾರೆ.

ಹಲವಾರು ಬೀದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದ ಕಳಪೆ ಗುಣಮಟ್ಟದ ವಸ್ತು, ನಕಲಿ ಸಿಡಿಗಳನ್ನು ಈ ಸಂದರ್ಭದಲ್ಲಿ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಕಾರ್ಮಿಕ ಕಾನೂನುನನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರನ್ನೆಲ್ಲ ಬಂಧಿಸಲಾಗಿದೆ. ಇದರಲ್ಲಿ 350 ರಸ್ತೆ ಬದಿ ಮಾರಾಟಗಾರರು, 53 ಭಿಕ್ಷುಕರು, 75 ಮಂದಿ ಕಾರು ತೊಳೆಯುವ ಮಂದಿ ಹಾಗೂ 21 ಮೀನು ಸ್ವಚ್ಛ ಮಾಡುವ ಜನರನ್ನು ಸೆರೆ ಹಿಡಿಯಲಾಗಿದೆ.

ರೆಡಿಮೇಡ್ ಗಾರ್ಮೆಂಟ್ಸ್, ಸುಗಂಧ ದ್ರವ್ಯ ಹಾಗೂ ದೂರಾಣಿಗಳನ್ನು ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಅಧಿಕಾರಿಗಳು ಆರೋಪಿಸಿದ್ದಾರೆ. ಸುಮಾರು ಏಳು ಸಾವಿರ ನಕಲಿ ಡಿವಿಡಿ, 67 ಅಶ್ಲೀಲ ಸಿನಿಮಾ ಸಿಡಿ, ಆಹಾರೋತ್ಪನ್ನ ವಶಪಡಿಸಿಕೊಂಡಿರುವುದಾಗಿ ವಿವರಿಸಿದ್ದಾರೆ.

ದುಬೈ ಮುನ್ಸಿಪಾಲ್ಟಿ, ದುಬೈ ಪೊಲೀಸ್ ಹಾಗೂ ದುಬೈ ರೆಸಿಡೆನ್ಸಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 499 ಮಂದಿಯನ್ನು ಬಂಧಿಸಲಾಗಿದೆ.
ಇವನ್ನೂ ಓದಿ