ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿಗೆ ಬೇರೆ ದಾರಿ ಇಲ್ಲ, ದೇಶ ತ್ಯಜಿಸಿ: ಹಿಲರಿ ಕ್ಲಿಂಟನ್ (Libya | Muammar Al Gaddafi | Hillary Clinton | US | leave)
ಲಿಬಿಯಾ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿಗೆ ಬೇರೆ ದಾರಿ ಇಲ್ಲ, ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವುದೇ ಅವರಿಗೆ ಇರುವ ಅಂತಿಮ ಅವಕಾಶ. ಅಲ್ಲದೇ ಅವರು ದೇಶಬಿಟ್ಟು ಹೋಗಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.

ಗಡಾಫಿಗೂ ಸ್ಪಷ್ಟವಾಗಿ ತಿಳಿದಿದೆ, ಈ ಸಂದರ್ಭದಲ್ಲಿ ಅವರು ಉದ್ದಟತನದ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕಾಗಿ ಅವರು ಸಮರಕ್ಕೆ ಮುಂದಾಗಿದ್ದಾರೆ. ಬಲವಂತವಾಗಿ ತಮ್ಮ ಮಿಲಿಟರಿ ಪಡೆಯ ಬಲ ಪ್ರಯೋಗಿಸಿ ಜನಸಾಮಾನ್ಯರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಆರೋಪಿಸಿದರು.

ಆ ನಿಟ್ಟಿನಲ್ಲಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವ ಬಗ್ಗೆ ಗಡಾಫಿ ಸೂಕ್ತ ನಿರ್ಧಾರ ಕೈಗೊಳ್ಳಲೇಬೇಕು. ಆದರೂ ಗಡಾಫಿ ಈ ಸಂದರ್ಭದಲ್ಲಿ ತಾನು ಅಧಿಕಾರ ಬಿಡಲ್ಲ ಎಂದು ಹೇಳುತ್ತಿರುವ ಹಿಂದಿನ ರಹಸ್ಯವಾದರೂ ಏನೂ ಎಂದು ತಿಳಿಯುತ್ತಿಲ್ಲ ಎಂದರು.

ಏತನ್ಮಧ್ಯೆ ಗಡಾಫಿಯನ್ನು ಗಡಿಪಾರು ಮಾಡುವ ಕುರಿತು ಮಾತುಕತೆ ನಡೆಯುತ್ತಿರುವುದಾಗಿ ಹೇಳಿದ ಕ್ಲಿಂಟನ್, ಶೀಘ್ರವೇ ಗಡಾಫಿ ಅಧಿಕಾರಕ್ಕೆ ಅಂತ್ಯ ಹಾಡಲಾಗುವುದು ಎಂದು ತಿಳಿಸಿದರು.
ಇವನ್ನೂ ಓದಿ