ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಮೂಲಕ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರಾಜಧಾನಿಯಲ್ಲಿ ಸಾವಿರಾರು ಹಾಗೂ ದೇಶದೆಲ್ಲೆಡೆಯಾಗಿ ಅಸಂಖ್ಯಾತ ಕಾರ್ಯಕರ್ತರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಅಣ್ಣಾ ಹಜಾರೆ ಅವರ ಹೋರಾಟದ ಸ್ವರವು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಹೊರದೇಶವಾದ ಗಲ್ಫ್‌ನಲ್ಲೂ ಸಾವಿರಾರು ಮಂದಿ ಭಾರತದ ಬೆಳವಣಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಅವರು ತಮ್ಮ ಅನಿಸಿಕೆಗಳನ್ನು ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ವ್ಯಕ್ತಪಡಿಸಿದ್ದರಲ್ಲದೆ ಅಣ್ಣಾ ಅವರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಸಾಮಾನ್ಯವಾಗಿ ಭಾರತೀಯರು ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅಂದ ಹಾಗೆ ಕಳೆದ ರಾತ್ರಿ ಐಪಿಎಲ್ ಉದ್ಘಟನಾ ಕಾರ್ಯಕ್ರಮವಿದ್ದರೂ ಅದನ್ನು ನೋಡದ ಹೊರದೇಶದ ಭಾರತೀಯರು ಸರಕಾರದ ಪ್ರತಿನಿಧಿಗಳು ಹಾಗೂ ಹಜಾರೆ ಅವರ ಮಾತುಕತೆಯ ಫಲಿತಾಂಶವನ್ನು ಅರಿಯಲು ಕಾತರದಿಂದ ಟಿ.ವಿ ನೋಡುತ್ತಿದ್ದರು.
ಗಲ್ಫ್‌ನಲ್ಲಿ ಅಧಿಕೃತ ರಜಾದಿನವು ಶುಕ್ರವಾರ ಆಗಿದ್ದು, ಇದು ಕೂಡಾ ಅನಿವಾಸಿ ಭಾರತೀಯರನ್ನು ಮತ್ತಷ್ಟು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.