ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್ ಸಾಕ್ಷ್ಯದ ನಿರೀಕ್ಷೆ: ಲಖ್ವಿ ವಿಚಾರಣೆ ಮುಂದೂಡಿಕೆ (Zakiur Rehman Lakhvi | Ajmal Kasab | Mumbai attacks | anti-terrorism court)
ಮುಂಬೈ ಭಯೋತ್ಪಾದನಾ ದಾಳಿ ಸಂಚಿನಲ್ಲಿ ಭಾಗಿಯಾಗಿರುವ ಶಂಕಿತ ಏಳು ಮಂದಿ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು, ಲಷ್ಕರ್ ಇ ತೋಯ್ಬಾ ಕಮಾಂಡರ್ ಜಕೀವುರ್ ರೆಹ್ಮಾನ್ ಲಖ್ವಿ ಪರ ವಕೀಲರ ವಾದವನ್ನು ಆಲಿಸಿದ ನಂತರ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ.

2008ರ ಮುಂಬೈ ದಾಳಿಯ ಬದುಕುಳಿದಿರುವ ಏಕೈಕ ಪ್ರಧಾನ ಆರೋಪಿ ಅಜ್ಮಲ್ ಕಸಬ್ ಮತ್ತು ಶಂಕಿತ ಭಯೋತ್ಪಾದಕ ಫಾಹಿಂ ಅನ್ಸಾರಿಯ ವಿಚಾರಣೆಯನ್ನು ಪಾಕಿಸ್ತಾನದಲ್ಲಿ ನಡೆಸುವುದಕ್ಕೆ ಕುರಿತಾಗಿ ಸಲ್ಲಿಸಿರುವ ಅರ್ಜಿಯ ಅನುಸಾರ ಈ ವಿಚಾರಣೆ ಮುಂದೂಡಲಾಗಿದೆ.

ಸಿವಿಲ್ ಪ್ರಕ್ರಿಯೆ ಸಂಹಿತೆಯ 403ರ ಪರಿಚ್ಛೇದ ಮತ್ತು ಸಂವಿಧಾನ ಮಸೂದೆಯ 13ರಲ್ಲಿ ಅರ್ಜಿ ದಾಖಲಾತಿ ಮಾಡಲಿದೆ. ಇದರಂತೆ ಆರೋಪಿಯನ್ನು ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷಿಸುವಂತಿಲ್ಲ ಎಂದು ಲಖ್ವಿ ಪರ ವಕೀಲ ಶಹಬಾಜ್ ರಜಪೂತ್ ವಾದ ಮಾಡಿದರು. ಕಸಬ್‌ಗೆ ಈಗಾಗಲೇ ಭಾರತೀಯ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಅನ್ಸಾರಿಯನ್ನು ದೋಷಮುಕ್ತಗೊಳಿಸಿದೆಯಾದರೂ, ಬೇರೆ ಪ್ರಕರಣಗಳಿರುವುದರಿಂದ ಇನ್ನೂ ಆತ ಭಾರತ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಅವರಿಬ್ಬರನ್ನೂ ಸಾಕ್ಷಿಗಳಾಗಿ ಕರೆಸುವುದರಿಂದ ವಿಚಾರಣೆ ಇನ್ನಷ್ಟು ವಿಳಂಬವಾಗುತ್ತದೆ, ಆದಷ್ಟು ಬೇಗನೇ ವಿಚಾರಣೆ ಮುಂದುವರಿಸುವಂತೆ ಆರೋಪಿಗಳ ಪರ ವಕೀಲರು ಒತ್ತಾಯಿಸಿದ್ದರು.

ಏಳು ಶಂಕಿತ ಉಗ್ರರ ನಡೆಸಿದ ವಾದವನ್ನು ನ್ಯಾಯಾಧೀಶ ರಾಣಾ ನಿಸಾರ್ ಅಹ್ಮದ್ ಆಲಿಸಿದರು. ಭದ್ರತಾ ಭೀತಿ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ನಡುವೆ ಆದಿಯಾಲಾ ಜೈಲಿನಲ್ಲಿ ಮುಚ್ಚಿದ ಕೋಣೆಯೊಳಗೆ ಆರೋಪಿಗಳ ವಾದವನ್ನು ಆಲಿಸಲಾಗಿತ್ತು.

ಆರೋಪಿಗಳ ಮೇಲೆ ನಿಖರ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆಯನ್ನು ಕೊನೆಗೊಳಿಸುವಂತೆ ಆರೋಪಿಗಳ ಪರ ವಕೀಲರು ಬೇಡಿಕೆಯಿರಿಸಿದರು.
ಇವನ್ನೂ ಓದಿ