ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್ಚರ; ಪಾಕ್‌ನಲ್ಲಿ 400 ಆತ್ಮಾಹುತಿ ದಾಳಿಕೋರರಿಗೆ ತರಬೇತಿ (suicide bombers | Pakistan | North Waziristan | militant)
ಎಚ್ಚರ...ಎಚ್ಚರ...ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಯು 400 ಹದಿಹರೆಯದ ಯುವಕರಿಗೆ ಭಯೋತ್ಪಾದನೆಯ ತರಬೇತಿಯನ್ನು ನೀಡುತ್ತಿದೆ. ವಿಶ್ವದ ಹಲವೆಡೆ ಜಿಹಾದಿ ಹೋರಾಟ ಮುಂದುವರಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ.

ಸೆರೆಗೀಡಾಗಿರುವ 14ರ ಹರೆಯದ ಯುವಕ ಉಮರ್ ಫಿದಾಯಿ ಎಂಬವರಿಂದಲೇ ಇಂತಹ ಬೆಚ್ಚಿಬೀಳಿಸುವ ವರದಿ ಬಯಲುಗೊಂಡಿದೆ. ಅಫಘಾನಿಸ್ತಾನಕ್ಕೆ ತಾಗಿಕೊಂಡಿರುವ ಉಗ್ರರ ಭದ್ರ ನೆಲೆಯಾಗಿರುವ ಉತ್ತರ ವಾಜಿರಿಸ್ತಾನದಲ್ಲಿ ಆತ್ಮಾಹುತಿ ದಾಳಿಗಾರರಿಗೆ ತರಬೇತಿ ನೀಡಲಾಗುತ್ತಿದೆ.

ಪಾಕಿಸ್ತಾನ ಬುಡಕಟ್ಟು ಪ್ರದೇಶದಲ್ಲಿ ಅಲ್ ಕೈದಾ ಮತ್ತು ತಾಲಿಬಾನ್‌ಗಳಂತಹ ಉಗ್ರ ಸಂಘಟನೆಯ ನಿರ್ಮೂಲನೆಗೆ ಅಮೆರಿಕಾ ಭದ್ರತಾ ಪಡೆ ಅನೇಕ ದಾಳಿಗಳನ್ನು ಸಂಘಟಿಸುತ್ತಲೇ ಬಂದಿವೆ. ಹೀಗಿದ್ದರೂ ಉತ್ತರ ವಾಜಿರಿಸ್ತಾನದ ರಹಸ್ಯ ಪ್ರದೇಶದಲ್ಲಿ ತರಬೇತಿ ಮುಂದುವರಿಯುತ್ತಿದೆ ಎಂದು ಯುವ ಬಹಿರಂಗಪಡಿಸಿದ್ದಾರೆ.
ಇವನ್ನೂ ಓದಿ