ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಟ್ಲರ್ ಆತ್ಮಹತ್ಯೆ ಸುಳ್ಳು?: 30 ವರ್ಷ ಹುಡುಕಾಡಿದ ಯುಎಸ್ (Adolf Hitler | America | FBI | suicide | Soviet authorities | Berlin)
ಇದು ಜಗತ್ತಿನ ಹಿರಿಯಣ್ಣ ಅಮೆರಿಕದ ಸಣ್ಣತನದ ಪರಮಾವಧಿಯ ಪ್ರಸಂಗ...1945ರಲ್ಲಿ ಜರ್ಮನಿಯ ನಾಜಿ ಮುಖಂಡ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೂ ಕೂಡ ಅಮೆರಿಕ ಆ ಸುದ್ದಿಯನ್ನು ಸುತಾರಾಂ ಒಪ್ಪಿರಲಿಲ್ಲವಂತೆ. ಅದಕ್ಕಾಗಿ ಸುಮಾರು 30 ವರ್ಷಗಳ ಕಾಲ ತಲೆಕೆಡಿಸಿಕೊಂಡಿರುವ ಅಂಶವೊಂದು ಬಹಿರಂಗವಾಗಿದೆ.

ಎರಡನೇ ಮಹಾಯುದ್ಧದಲ್ಲಿ ಸೋಲುತ್ತಿದ್ದಂತೆಯೇ ಹಿಟ್ಲರ್ ಹಾಗೂ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಇದನ್ನು ನಂಬದ ಅಮೆರಿಕ ಹಿಟ್ಲರ್ ಆತ್ಮಹತ್ಯೆಯ ನಾಟಕವಾಡಿ ತಲೆಮರೆಸಿಕೊಂಡಿರುವುದಾಗಿ ಭಾವಿಸಿ ಆತನಿಗಾಗಿ 30 ವರ್ಷಗಳ ಕಾಲ ಶೋಧ ನಡೆಸಿತ್ತು ಎಂಬ ಸಂಗತಿ ಇದೀಗ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಯಿಂದ ಬೆಳಕಿಗೆ ಬಂದಿದೆ.

ಅಡಾಲ್ಫ್ ಹಿಟ್ಲರ್ ತನ್ನ ಪ್ರೇಯಸಿ ಇವಾ ಬ್ರಾನ್ ಜತೆ ಬರ್ಲಿನ್‌ನ ಬಂಕರ್‌ನಲ್ಲಿ 1945ರ ಏಪ್ರಿಲ್ 29ರಂದು ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದರು. ಆದರೂ ಹಿಟ್ಲರ್ ಆತ್ಮಹತ್ಯೆಯ ಗಾಳಿ ಸುದ್ದಿ ಹಬ್ಬಿಸಿದ್ದಾನೆ ಎಂದು ನಂಬಿದ ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಆತನಿಗಾಗಿ ವ್ಯಾಪಕ ಶೋಧ ನಡೆಸಿದ್ದರು.

ಅರ್ಜೇಂಟೀನಾದ ರಾಂಚ್, ಡೆನ್ಮಾರ್ಕ್‌ನ ಹೋಟೆಲ್, ನ್ಯೂಯಾರ್ಕ್ ನಗರಗಳಲ್ಲಿ ಹಿಟ್ಲರ್ ಅಡಗಿದ್ದಾನೆಂಬ ಎಫ್‌ಬಿಐ ಏಜೆಂಟ್‌ಗಳು ಮಾಡಿದ್ದ ವರದಿಯೂ ಬಹಿರಂಗವಾಗಿದೆ. ಹಿಟ್ಲರ್ ಗಡ್ಡಧಾರಿಯಾಗಿದ್ದಾನೆ. ನೀಟಾಗಿ ಶೇವ್ ಮಾಡಿಕೊಂಡಿದ್ದಾನೆ, ಆತನಿಗೆ ಅಸ್ತಮಾ ಇದೆ, ಹೊಟ್ಟೆಯಲ್ಲಿ ಹುಣ್ಣಾಗಿದೆ ಹೀಗೆ ತಮಗೆ ತೋಚಿದಂತೆ ಅಧಿಕಾರಿಗಳು ವರದಿ ಮಾಡಿದ್ದರು ಎಂಬ ಅಂಶ ಬಟಾಬಯಲಾಗಿದೆ.

ಈ ಎಲ್ಲಾ ಹುಡುಕಾಟದ ನಡುವೆ ಹಿಟ್ಲರ್ ತನ್ನ ಬಂಕರ್‌ನಲ್ಲಿ ತಾನೇ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬುದನ್ನು ಆತನ ನಿಕಟವರ್ತಿಗಳ ವರದಿಯಿಂದ ರಷ್ಯಾದ ಗುಪ್ತಚರ ಸಂಸ್ಥೆ ಸ್ಮರ್ಶ್ ಸಾಬೀತುಪಡಿಸಿತ್ತು. ಆ ಬಳಿಕವೇ ಅಮೆರಿಕಕ್ಕೆ ಸಮಾಧಾನವಾಗಿ, ತನ್ನ ಹುಟುಕಾಟಕ್ಕೆ ತಿಲಾಂಜಲಿ ಇಟ್ಟಿತ್ತು.
ಇವನ್ನೂ ಓದಿ